ಸೌಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೌಡದಲ್ಲಿ ಶಾಲಾ ವಾರ್ಷಿಕೋತ್ಸವ ಬಿದಿಗೆ ಸಂಭ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಸುಪ್ರೀತಾ ಉದಯ್ ಕುಲಾಲ್ ಇವರು ನೆರವೇರಸಿದರು.

Call us

Call us

Visit Now

ಕಾರ್ಯಕ್ರಮದ ಅದ್ಯಕ್ಷತೆಯನ್ನು ತಾಲೂಕು ಪಂಚಾಯತ್‌ ಸದಸ್ಯರಾದ ಸವಿತಾ ಮೊಗವೀರ ಇವರು ವಹಿಸಿ ಶಾಲೆಯ ಬೇಡಿಕೆಗಳಿಗೆ ಕೂಡಲೆ ಸ್ಪಂದಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ ಆರ್‌ ಅಡಿಗ ಇವರು ಮಖ್ಯ ಅತಿಥಿಯಾಗಿ ಶಾಲೆಯನ್ನು ಉತ್ತಮವಾಗಿ ಪ್ರಗತಿ ಪಥದತ್ತ ಸಾಗಲು ಅಧ್ಯಾಪಕರ ಜೊತೆ ವಿಧ್ಯಾಭಿಮಾನಿಗಳ ಸಹಕಾರ ಅತ್ಯಗತ್ಯ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು.

Click here

Call us

Call us

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರ ವಲಯ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರು ಹಾಗು ಪ್ರಭಾರ ಶಿಕ್ಷಣ ಸಂಯೋಜಕರಾಗಿರುವ ಸೂರಪ್ಪ ಹೆಗ್ಡೆ, ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾರಾಮ್‌ ಶೆಟ್ಟಿ, ಕೆನೆರಾ ಬ್ಯಾಂಕ್‌ ನಿವೃತ್ತ ಚೀಫ್‌ ಮ್ಯಾನೇಜರ್‌ ಚಂದ್ರಶೇಖರ ಅಡಿಗ ಹೆಗ್ದೆಜೆಡ್ಡು, ಶಾಲಾ ಎಸ್‌ ಡಿ ಎಂ ಸಿ ಅಧ್ಯಕ್ಷರಾಗಿರುವ ಗೋಪಾಲ ಸೌಡ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಜಗನ್ನಾಥ ಶೆಟ್ಟಿ ಇವರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನಿವೃತ್ತ ಅಂಚೆಪಾಲಕ ಲಕ್ಷ್ಮೀ ನಾರಾಯಣ್‌ ಭಟ್‌ ಸೌಡ, ವಿಶಿಷ್ಟ ಸೇವಾ ಪದಕ ಪುರಸ್ಕೃತ ನಿವೃತ್ತ ಸೈನಿಕ ಭಾಸ್ಕ ಶೆಟ್ಟಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯೋಪಾದ್ಯಾಯ ಬಿ. ಚಂದ್ರಶೇಖರ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಶಾಲಾ ಹಳೆ ವಿದ್ಯಾರ್ಥಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ದಿವಾಕರ ಶೆಟ್ಟಿ ಇವರು ಸ್ವಸ್ತಿ ವಾಚನಗೈದರು, ಶಾಲಾ ವರದಿಯನ್ನು ಮುಖ್ಯೋಪಾದ್ಯಾಯರಾದ ಚಂದ್ರಶೇಖರ ಶೆಟಿಯವರು ವಾಚಿಸಿ, ವಾರ್ಷಿಕೋತ್ಸವಕ್ಕೆ ಧನಸಹಾಯ ನೀಡಿದ ವಿದ್ಯಾಭಿಮಾನಿಗಳನ್ನು,ಜನಪ್ರತಿನಿಧಿಗಳನ್ನು, ಶಾಲಾ ಆಡಳಿತ ಮಂಡಳಿಯವರನ್ನು, ಪೋಷಕರನ್ನು, ಶಾಲಾ ಅಧ್ಯಾಪಕ ವೃಂದದವರನ್ನು ಅಭಿನಂದಿಸಿದರು. ವಿವಿದ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಶಾಲಾ ಅಧ್ಯಾಪಕ ಕರುಣಾಕರ ಶೆಟ್ಟಿ ವಾಚಿಸಿದರು. ಶಾಲಾ ಶಿಕ್ಷಕಿ ಪ್ರತಿಮಾ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಕಂಪ್ಯೂಟರ್‌ ಶಿಕ್ಷಕಿ ಸುಮಿತ್ರಾ ಸಹಕರಿಸಿದರು. ಪ್ರಕಾಶ್‌ ಶೆಟ್ಟಿ ಇವರು ನಿರೂಪಿಸಿದರು.

ಕಾರ್ಯಕ್ರಮದ ಮೊದಲಿಗೆ ಅಂಗನವಾಡಿ ಮತ್ತು ನಲಿಕಲಿ ಪುಟಾಣಿಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ, ಸಭಾ ಕಾರ್ಯಕ್ರಮದ ನಂತರ ಶಾಲಾವಿದೈಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಮತ್ತು ಊರ ವಿದ್ಯಾಭಿಮಾನಿಗಳಿಂದ ವಿವಿದ ಮನೋರಂಜನಾ ಕಾರ್ಯಕ್ರಮ, ಶಾಲಾ ವಿದ್ಯಾರ್ಥಿಗಳಿಂದ ಐತಿಹಾಸಿಕ ನಾಟಕ “ದೇವಿ ಅಬ್ಬಕ್ಕ ರಾಣಿ”, ಮತ್ತು ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ “ ಶಾಪ ಸಂಯೋಗ- ಕಂಸ ದಿಗ್ವಿಜಯ” ವನ್ನು ಪ್ರದರ್ಶಿಸಲಾಯಿತು.

ಬೆಳಿಗ್ಗೆ ಧ್ವಜಾರೋಹಣವನ್ನು ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸವಿತಾರವರು ನೇರವೇರಿಸಿದರು. ಶಾಲಾ ಎಸ್‌ ಡಿ ಎಂ ಸಿ ಅಧ್ಯಕ್ಷರಾಗಿರುವ ಗೋಪಾಲ ಸೌಡ ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ಸದಸ್ಯರಾದ ಚಂದ್ರಶೇಖರ ಶೆಟ್ಟಿ ಪರ್ವತಬೆಟ್ಟು, ಜ್ಯೋತಿ, ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ ಶೆಟ್ಟಿ, ಮತ್ತು ನಿವೃತ್ತ ಮುಖ್ಯೋಪಾದ್ಯಾಯ ಸುಧಾಕರ ಶೆಟ್ಟಿ ಇವರು ಭಾಗವಹಿಸಿದ್ದರು. ನಂತರ ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.

Leave a Reply

Your email address will not be published. Required fields are marked *

2 × three =