ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ,ಸೆ.12: ಕುಂದಾಪುರ ತಾಲೂಕಿನ ಮೋವಾಡಿ ಎಂಬಲ್ಲಿ ಸೌಪರ್ಣಿಕಾ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಮರಳು ಅಡ್ಡೆ ಮೇಲೆ ಗಂಗೊಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.
ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ ಗಂಗೊಳ್ಳಿ ಪಿಎಸ್ಐ ಹರೀಶ್ ಆರ್ ಹಾಗೂ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿ ಆಪಾದಿತರು ಕೃತ್ಯಕ್ಕೆ ಬಳಿಸಿದ ಒಟ್ಟು 2,13,500 ರೂಪಾಯಿ ಮೌಲ್ಯದ 2 ದೋಣಿ, ಪ್ಲಾಸ್ಟಿಕ್ ಬುಟ್ಟಿಗಳು, ಕಬ್ಬಿಣದ ಬಕೆಟುಗಳು, ಮರದ ಹಲಗೆ, ಕಬ್ಬಿಣದ ಸ್ಟ್ಯಾಂಡ್ ಮತ್ತು ಒಂದು ಯುನಿಟ್ ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ನಾಲ್ವರು ಉತ್ತರ ಪ್ರದೇಶದ ಕಾರ್ಮಿಕರು ಹಾಗೂ ಓರ್ವ ಸ್ಥಳೀಯ ಅಕ್ರಮ ದಕ್ಕೆ ನಡೆಸುತ್ತಿದ್ದ ಅಲ್ಟನ್ ಎಂಬುವವರನ್ನು ವಶಕ್ಕೆ ಪ್ರಕರಣ ದಾಖಲಿಸಲಾಗಿದೆ.