ಸೌಹಾರ್ದತೆ ನಮ್ಮ ಬದುಕಾಗಬೇಕು: ಯು. ಟಿ ಖಾದರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಡಿಯ ಬ್ಯಾರೀಸ್ ವಿದ್ಯಾಸಂಸ್ಥೆಯ ಕೋಟೆ ಮನ್ಸೂರ್ ಕೋಟೆ ಮತ್ತು ಅವರ ತಂಡದಿಂದ ಆಯೋಜಿಸಲಾದ ಕೋಟೆ ಫ್ರೆಂಡ್ಸ್ ಕ್ರಿಕೆಟರ್ಸ ಕೋಡಿ ಫ್ರೆಂಡ್ಸ್ ಟ್ರೋಫಿ 2020-21ರ ಸಮಾರೋಪ ಸಮಾರಂಭ ನಡೆಯಿತು.

ಮುಖ್ಯ ಅಥಿತಿಯಾಗಿ ಆಗಮಿಸಿದ ಮಂಗಳೂರು ಭಾಗದ ಶಾಸಕರಾದ ಜನಾಬ್ ಯು. ಟಿ ಖಾದರ್ ಮಾತನಾಡುತ್ತಾ ಯುವಕರು ಹೆಚ್ಚಿನ ಸಮಯವನ್ನು ಕ್ರೀಡೆಯಲ್ಲಿ ಕಳೆಯುವುದರಿಂದ ಕ್ರೀಡಾಭಿಮಾನವು ದೇಶದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ರಕ್ಷಿಸಲು ಪ್ರೇರಣೆಯಾಗುತ್ತದೆ.ಆದ್ದರಿಂದ ಕ್ರೀಡೆಯ ಮೂಲಕವೂ ಕೂಡ ಸೌಹಾರ್ದತೆ ನಮ್ಮ ಬದುಕಾಗಬೇಕು ಎಂದರು. ತಾಯಿಯ ಗರ್ಭದಲ್ಲಿ ಮಕ್ಕಳಾಗಿ ನಂತರ ಪರಿಸರ ದಲ್ಲಿ ಬೆಳೆಯುವ ನಾವು ಯಾವ ಕ್ಷಣದಲ್ಲಾದರೂ ಮಣ್ಣಲ್ಲಿ ಮಣ್ಣಾಗುವವರು. ಆದ್ದರಿಂದ ಎಲ್ಲರೂ ಸೌಹಾರ್ದತೆಯಿಂದ ಬದುಕಿ ಬಾಳೋಣ ಎಂದರು.

ಬ್ಯಾರೀಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸಯ್ಯಾದ್ದ್ ಮಹಮ್ಮದ್ ಬ್ಯಾರೀ, ಕೃಷ್ಣಾನಂದ ಹೆಗ್ಡೆ ಟ್ರಸ್ಟೀ ಜನಪ್ರತಿನಿಧಿ ಸೇವಾ ಟ್ರಸ್ಟ್ ರಿ.ಕೋಟೇಶ್ವರ, ಪ್ರತಿಪಾಡಿ ನ್ಯಾಷನಲ್ ಕೌನ್ಸಿಲ್ ಜೆಡಿಎಸ್ ಸದಸ್ಯರಾದ ಜನಾಬ್ ಹೈದರ್, ಉತ್ತರ ಕನ್ನಡ ಜನತಾದಳ ಮುಖಂಡರಾದ ಇನಾಯ್ತುಲ್ಲಾ ಶಭಾನಂಧಾರೀ, ಮಾಜಿ ಮಂಗಳೂರು ಉತ್ತರ ಭಾಗದ ಶಾಸಕರಾದ ಮೈಜೋದಿನ್ ಭಾವ, ಅಬ್ದುಲ್ ಕೌಂಚೀ ಯನಪೋ ಗ್ರೂಪ್, ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ,ಮನ್ಸೂರ್ ಕೋಟೆ ಕೋಡಿ, ಅಭು ಮಹಮದ್ ಪುರಸಭೆ ಸದಸ್ಯರು ಹಾಗೂ ಕುಂದಾಪುರ ಪಿ.ಎಸ್.ಐ. ಸದಾಶಿವ ಆರ್. ಗರೋಜಿಯವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

17 + 12 =