ಸ್ಕೇಟಿಂಗ್: ಇಬ್ಬರು ಬಾಲಕರ ಹೊಸ ದಾಖಲೆ

Call us

Call us

ಕಾರವಾರ: ಕೈಗಾ ವಸತಿ ಸಂಕೀರ್ಣದಲ್ಲಿ ನಡೆದ ಸ್ಕೇಟಿಂಗ್ ಪ್ರದರ್ಶನದಲ್ಲಿ ಕೈಗಾ ಅಟೊಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲಿ ನಲ್ಲಿ ಓದುತ್ತಿರುವ ಇಬ್ಬರು ಪುಟ್ಟ ಬಾಲ ಕರು ಹೊಸ ದಾಖಲೆ ನಿರ್ಮಿಸಿದ್ದಾರೆ.

Click Here

Call us

Call us

ವಸತಿ ಸಂಕೀರ್ಣದ ರಸ್ತೆಯಲ್ಲೇ ನಡೆದ ಪ್ರದರ್ಶನದಲ್ಲಿ 2ನೇ ತರಗತಿ ಓದುತ್ತಿರುವ ಗಗನದೀಪ ಆಂಜನಪ್ಪ ಗೌಡ 8.5 ಇಂಚು ಎತ್ತರದ 80 ಬಾರುಗಳ ಕೆಳಗೆ ನುಸುಳಿ 240 ಮೀಟರ್ ಕ್ರಮಿಸುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾನೆ. ಇದಕ್ಕೆ ಗಗನ ತೆಗೆದುಕೊಂಡ ಸಮಯ 1 ನಿಮಿಷ 2 ಸೆಕೆಂಡುಗಳು . ಮುಮ್ಮುಖವಾಗಿ ಚಲಿಸುವ ಈ ಲಿಂಬೋ ಸ್ಕೇಟಿಂಗ್ ದಾಖಲೆ ಈ ಮೊದಲು ಚೆನ್ನೈನ ಮೆಡ್ವಿನ ದೇವಾ ಹೆಸರಿನಲ್ಲಿತ್ತು. ಮೆಡ್ವಿನ್ ಫೆ. 22, 2014ರಲ್ಲಿ 50 ಮೀಟರ್, 40 ಬಾರ್, 9 ಇಂಚು ಎತ್ತರ, 41 ಸೆಕಂಡುಗಳ ದಾಖಲೆ ಮಾಡಿದ್ದ. ಇದೇ ಸಮಯದಲ್ಲಿ ಒಂದನೇಯ ತರಗತಿಯಲ್ಲಿ ಓದುತ್ತಿ ರುವ ಶಿಶಿರ ಗೋವರ್ಧನ ರೆಡ್ಡಿ ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್‌ನಲ್ಲಿ 8.5 ಇಂಚು ಎತ್ತರದ 70 ಬಾರುಗಳ ಕೆಳಗೆ 140 ಮೀಟರ್ ಕ್ರಮಿಸಿ ದಾಖಲೆ ಸ್ಥಾಪಿಸಿದ್ದಾನೆ. ಬೆಳಗಾವಿಯ ಅಭಿಷೇಕ ನವಲೆ (8.7 ಇಂಚು ಎತ್ತರ 21 ಮೀ.) ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾನೆ.

Click here

Click Here

Call us

Visit Now

ಪ್ರದರ್ಶನ ನಂತರ ಇಂಡಿಯಾ ಬುಕ ಆಫ್ ರೆಕಾರ್ಡ್ಸ್‌ನ ಮೋಹನಸಿಂಗ್ ರಾವತ್ ದಾಖಲೆ ಘೋಷಿಸಿ ಪ್ರಶಸ್ತಿ ನೀಡಿದರು. ನಂತರ ಸಾಧಕರನ್ನು ಮತ್ತು ತರಬೇತುದಾರ ದಿಲೀಪ ಹಣಬರ ಅವರನ್ನು ಕೈಗಾ ರೋಲರ್ ಸ್ಕೇಟಿಂಗ್ ಅಕಾಡೆಮಿಯಿಂದ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

5 × 5 =