ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ

Call us

Call us

ಕೊಲ್ಲೂರು: ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು, ನಿರಂತರ ಮೌಲ್ಯ ಮಾಪನ ಕಾರ್ಯದಲ್ಲಿ ಒಂದು ಉತ್ತಮ ಸಾಧನವಾಗಿದೆ. ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಅಧಿಕವಾಗಬೇಕು ಎಂದು ಶ್ರೀ ಮೂಕಾಂಬಿಕಾ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ನಾಗರಾಜು ಹೇಳಿದರು.

Call us

Call us

Call us

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೈಂದೂರು ಇವರ ನೇತೃತ್ವತ್ವದಲ್ಲಿ ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಜಯೇಂದ್ರ ನಗರದ ಶ್ರೀ ಮೂಕಾಂಬಿಕಾ ಪಬ್ಲಿಕ್ ಸ್ಕೂಲ್‌ನ ಆತಿಥ್ಯ ಮತ್ತು ಸಹಭಾಗಿತ್ವದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಟಲಾಂ ನಾಯಕರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಮಾತನಾಡಿ ಮುಂದಿನ ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆ ಇನ್ನೂ ಹೆಚ್ಚಾಗುವುದು ಅವಶ್ಯಕ ಹಾಗೂ ಅನಿವಾರ್ಯಎಂದರು. ಸ್ಥಳೀಯ ಸಂಸ್ಥೆ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ಅಧ್ಯಕ್ಷತೆವಹಿಸಿದ್ದರು. ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ನರಸಿಂಹ ದೇವಾಡಿಗ, ಕಾರ್ಯದರ್ಶಿ ಮಂಜುನಾಥ ಹೆಗಡೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಸ್ಥಾನೀಯ ಆಯುಕ್ತ ಆನಂದ ಅಡಿಗ, ಜಿಲ್ಲಾ ಗೈಡ್ಸ್ ಸಂಘಟಕಿ ಸುಮನ್ ಶೇಖರ್, ಶಿಬಿರದ ನಾಯಕ ಸಂಪತ್ಕುಮಾರ್ ಉಪಸ್ಥಿತರಿದ್ದರು. ಸಹಶಿಕ್ಷಕ ಜಿ.ಕೆ.ಭಟ್ ನಿರೂಪಿಸಿದರು. ಸಹಶಿಕ್ಷಕಿ ಸುನೀತಾ ವಂದಿಸಿದರು.

ಬೈಂದೂರು ವಲಯದ 246 ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಭಾಗವಹಿಸಿದ್ದ ಈ ಶಿಬಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಅಡಕವಾಗಿರುವ ಪಟಲಾಂ ವ್ಯವಸ್ಥೆಯ ಬಗ್ಗೆ ತರಬೇತಿ ನೀಡಲಾಯಿತು. ಬ್ಯಾಂಡೇಜ್, ಪ್ರಥಮ ಚಿಕಿತ್ಸೆ ಹಾಗೂ ಕಟ್ಟು ಮತ್ತು ಗಂಟುಗಳ ಕುರಿತು ತಿಳಿಸಲಾಯಿತು. ಸ್ಕೌಟರ್‌ಗಳಾದ ಶೇಖರ ಗಾಣಿಗ, ನರಸಿಂಹ ಮೂರ್ತಿ, ಹನುಮಂತ, ಸಂಪತ್‌ಕುಮಾರ್, ಪ್ರದೀಪ್ ಮತ್ತು ಗೈಡರ್‌ಗಳಾದ ಶ್ರೀಮಾತಾ ಶಾಂತಿ ಪಾಯಸ್, ಪಾರ್ವತಿ, ಪುಷ್ಪಲತಾ ಮೊದಲಾದವರು ತರಬೇತಿ ನೀಡಿದರು.

Leave a Reply

Your email address will not be published. Required fields are marked *

14 − five =