ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ: ಸುವರ್ಣ ಮಹೋತ್ಸವ ವಿಶೇಷ ಸಂಚಿಕೆ ‘ಹೊಂಬೆಳಕು’ ಬಿಡುಗಡೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬದುಕಿನ ಕೌಶಲ್ಯವನ್ನು ಕಲಿಸುವುದು ನಿಜವಾದ ಶಿಕ್ಷಣ ಎನ್ನಿಸಿಕೊಳ್ಳುತ್ತದೆ.ಸಾಹಿತ್ಯ ಬಗೆಗಿನ ಆಸಕ್ತಿ ಎನ್ನುವುದು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಬೆಳೆಸಿ ಅವರನ್ನು ನಿರಂತರವಾಗಿ ಕ್ರಿಯಾಶೀಲರನ್ನಾಗಿಸಲು ಸಹಾಯ ಮಾಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕುಂದಾಪುರ ಘಟಕದ ಅಧ್ಯಕ್ಷರಾದ ಡಾ. ಸುಬ್ರಮಣ್ಯ ಭಟ್ ಅಭಿಪ್ರಾಯಪಟ್ಟರು.

Call us

Call us

ಅವರು ಇತ್ತೀಚೆಗೆ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಹೊರತರಲಾದ ವಿಶೇಷ ಸಂಚಿಕೆ ‘ಹೊಂಬೆಳಕು’ ಬಿಡುಗಡೆಗೊಳಿಸಿ ಮಾತನಾಡಿದರು. ಇಂತಹ ಸಂಚಿಕೆಗಳ ಮೂಲಕ ಇತಿಹಾಸವನ್ನು ದಾಖಲಿಸುವ ಪ್ರಯತ್ನಗಳ ಜೊತೆಗೆ ಪ್ರತಿಭೆಯನ್ನು ಪೋಷಿಸುವ ಕೆಲಸ ಆಗುತ್ತದೆ. ಕನ್ನಡದ ನಾಡು ನುಡಿಯ ಕಾಳಜಿಯೂ ಪ್ರೇರಣೆಗೊಳ್ಳುತ್ತದೆ ಎಂದು ಅವರು ಹೇಳಿದರು.

Call us

Call us

ಪ್ರಧಾನ ಸಂಪಾದಕ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಚಿಕೆಯನ್ನು ಹೊರತರಲು ಸಹಕರಿಸಿದ ಎಲ್ಲರ ಸಹಕಾರವನ್ನು ಸ್ಮರಿಸಿ ಅಭಿನಂದಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಜು ದೇವಾಡಿಗ, ಹೊಂಬೆಳಕು ಸಂಪಾದಕ ಮಂಡಳಿಯ ಸದಸ್ಯರಾದ ಅಬ್ದುಲ್ ಸಲಾಂ, ಗಣೇಶ್ ಹೆಬ್ಬಾರ್, ಸಂಧ್ಯಾ ಪಟೇಲ್, ಶಾಲೆಟ್ ಲೋಬೋ, ಫ್ಲೊಸ್ಸಿ ಕೋಸ್ತಾ, ಸುವರ್ಣ ಮಹೋತ್ಸವ ಸಮಿತಿಯ ಸದಸ್ಯ ಮೊಹಮ್ಮದ್ ಫಾಝಿಲ್ ಮೊದಲಾದವರು ಉಪಸ್ಥಿತರಿದ್ದರು. ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯ ಕಾರ‍್ಯದರ್ಶಿ ಜ್ಯೂಲಿ ಆನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಜುನಿತ್ ಮಚಾದೊ ಸ್ವಾಗತಿಸಿದರು. ಶಿಕ್ಷಕಿ ಫೆಲ್ಸಿಯಾನ ಡಿಸೋಜ ಕಾರ‍್ಯಕ್ರಮ ನಿರ್ವಹಿಸಿದರು.ಶಿಕ್ಷಕಿ ಶಾಂತಿ ಸಿ ಕ್ರಾಸ್ತಾ ವಂದಿಸಿದರು.

Leave a Reply

Your email address will not be published. Required fields are marked *

15 − 3 =