ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ಅಭ್ಯಾಸ ಅಗತ್ಯ: ಗೌರವ್ ಕುಮಾರ್ ಶೆಟ್ಟಿ.

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಸಾಧನೆ ಮಾಡಲು ಸಾಧ್ಯ.ಆದ್ದರಿಂದ ವಿದ್ಯಾರ್ಥಿಗಳು ಸಮಯ ಹಾಳು ಮಾಡದೆ ನಮ್ಮ ಗುರಿ ಕಡೆಗೆ ಮನಸ್ಸು ಕೇಂದ್ರಿಕರಿಸಿಕೊಂಡು ಹೆಚ್ಚಿನ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದು ಮಡಿಕೇರಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಗೌರವ್ ಶೆಟ್ಟಿ ಹೇಳಿದರು

Call us

Call us

Call us

ಅವರು ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್,ಕೋಟದಲ್ಲಿ ವಿ-ಶೈನ್ ತರಬೇತಿ ಸಂಸ್ಥೆ ಆಸರೆಯಲ್ಲಿ ನಡೆಯುತ್ತಿರುವ ಕರ್ನಾಟಕ ಲೋಕಸೇವಾ ಆಯೋಗವು ಕರೆದಿರುವ 2000 ಕ್ಕೂ ಮಿಕ್ಕಿ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವೀತಿಯ ದರ್ಜೆ ಸಹಾಯಕ ಹುದ್ದೆಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ವಿ-ಶೈನ್ ಸಂಸ್ಥೆಯ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿಯೇ ಓದಿನಲ್ಲಿ ಹೆಚ್ಚಿನ ಕಡೆ ಗಮನ ಹರಿಸಿ ಅಲ್ಲದೇ ಜ್ಞಾನ ಹೆಚ್ಚಿಸುವ ಪುಸ್ತಕವನ್ನು ಹೆಚ್ಚಾಗಿ ಓದಬೇಕು ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು.

ಈ ಸಂದರ್ಭದಲ್ಲಿ ವಿ-ಶೈನ್ ನ ಗಿರೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾರಂತ ಥೀಮ್ ಪಾರ್ಕ್‌ನ ಪರವಾಗಿ ಮೇಲ್ವಿಚಾರಕ ಪ್ರಶಾಂತ್‌ರವರು ಗೌರವಪೂರ್ವಕವಾಗಿ ತರಬೇತುದಾರರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ತರಬೇತಿಯು ನಿರಂತರವಾಗಿ ಮುಂದುವರೆಯಲಿದ್ದು, ಕರಾವಳಿ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

five + eleven =