‘ಸ್ಪೂರ್ತಿ’ ರೋಟರಿ ವಲಯ ಕ್ರೀಡಾಕೂಟ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ವಲಯ೧ರ ಕ್ರೀಡಾಕೂಟ ಸ್ಪೂರ್ತಿ-೨೦೧೬ ಕುಂದಾಪುರದ ಗಾಂಧಿ ಮೈದಾನದಲ್ಲಿ ನ. ೨೭ರಂದು ಉದ್ಘಾಟನೆಗೊಂಡಿತು.

Call us

Call us

Click Here

Visit Now

ಕ್ರೀಡಾಕೂಟವನ್ನು ರೋಟರಿ ಸಹಾಯಕ ಗವರ್ನರ್ ಮಧುಕರ ಹೆಗ್ಡೆ ಉದ್ಘಾಟಿಸಿ, ಕ್ರೀಡಾಕೂಟ ಆಯೋಜನೆಯಲ್ಲಿ ಶಿಸ್ತು ಅಚ್ಚುಕಟ್ಟುತನದೊಂದಿಗೆ ಯಶಸ್ವಿಯಾಗಿ ಸಂಘಟಿಸುತ್ತಿರುವ ರೋಟರಿ ಕುಂದಾಪುರದ ಕಾರ್ಯಚಟುವಟಿಕೆ ಪ್ರಶಂಸನೀಯ. ಸ್ಪರ್ಧೆಗಿಂತ ಭಾಗವಹಿಸುವಿಕೆ ತುಂಬಾ ಮಹತ್ವದ್ದಾಗಿದ್ದು, ನಮ್ಮೆಲ್ಲರ ಭಾಂದವ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂದು ಕ್ರೀಡಾಳುಗಳಿಗೆ ಶುಭಕೋರಿದರು.

Click here

Click Here

Call us

Call us

ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಮುಖ್ಯಅತಿಥಿಗಳಾಗಿ ಜೋನಲ್ ಲೆಫ್ಟಿನೆಂಟ್ ಡಾ. ರವಿಕಿರಣ್, ರೋಟರಿ ವಲಯ ಕ್ರೀಡಾ ಸಂಯೋಜಕ ಮನೋಜ್ ನಾಯರ್, ಕ್ರೀಡಾಕೂಟ ಸಂಚಾಲಕ ರಂಜಿತ್ ಶೆಟ್ಟಿ, ರೋಟರಿ ಕುಂದಾಪುರ ಸದಸ್ಯ ರೋವನ್ ಡಿ’ಕೋಸ್ಟಾ ಉಪಸ್ಥಿತರಿದ್ದರು.

ರೋಟೇರಿಯನ್ಸ್, ಆನ್ಸ್, ಅನೆಟ್ಸ್ ಮೂರು ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ರೋಟರಿ ವಲಯ ೧ರ ವ್ಯಾಪ್ತಿಗೊಳಪಡುವ ರೋಟರಿ ಕ್ಲಬ್ ಸಿದ್ಧಾಪುರ ಹೊಸಂಗಡಿ, ರೋಟರಿ ಕ್ಲಬ್ ಗಂಗೊಳ್ಳಿ, ರೋಟರಿ ಕ್ಲಬ್ ಬೈಂದೂರು, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್, ರೋಟರಿ ಕ್ಲಬ್ ಕುಂದಾಪುರ ಮಿಡ್‌ಟೌನ್, ರೋಟರಿ ಕ್ಲಬ್ ಕುಂದಾಪುರ ಸೌತ್ ಹಾಗೂ ರೋಟರಿ ಕ್ಲಬ್ ಕುಂದಾಪುರದ ಸದಸ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕ್ರೀಡಾಕೂಟ ನಿರ್ವಹಣೆಯಲ್ಲಿ ರೋಟರಿ ಕುಂದಾಪುರ ಸದಸ್ಯರಾದ ಶ್ರೀಪಾದ ಉಪಧ್ಯಾಯ, ಸತೀಶ್ ಕೋಟ್ಯಾನ್, ನಿಯೋಜಿತ ಅಧ್ಯಕ್ಷ ಗಣೇಶ್ ಐತಾಳ್, ರಾಘವೇಂದ್ರ ಚರಣ ನಾವಡ ಇನ್ನಿತರರು ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ನಾರಾಯಣ ಶೆಟ್ಟಿ, ಮಂಜುನಾಥ, ಕೇಶು ರಾಥೋಡ್, ಶ್ರೀಧರ ಆಚಾರ್ಯ, ಸತೀಶ್ ತೀರ್ಪುಗಾರರಾಗಿ ಸಹಕರಿಸಿದರು.

Leave a Reply

Your email address will not be published. Required fields are marked *

7 + 16 =