ಸ್ವಚ್ಛ ಕಡಲ ತೀರ – ಹಸಿರು ಕೋಡಿ ಅಭಿಯಾನ -2022

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಡಿ ಬ್ಯಾರೀಸ್ ವಿದ್ಯಾ ಸಂಸ್ಥೆಗಳು ಇವರು ಪ್ರಾರಂಭಿಸಿದ ” ಸ್ವಚ್ಛ ಕಡಲ ತೀರ -ಹಸಿರು ಕೋಡಿ” 2022 ರ ಅಭಿಯಾನದ ಪ್ರಥಮ ಹಂತದ ಸ್ವಚ್ಛತಾ ಕಾರ್ಯಕ್ರಮ ಕೋಡಿಯಲ್ಲಿ ಭಾನುವಾರ ಜರುಗಿತು. ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ರಕ್ಷಕ- ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಪ್ರಾಕ್ತನ ವಿದ್ಯಾರ್ಥಿಗಳು, ಊರಿನ ಪ್ರಮುಖರು ಹಾಗೂ ಮಹಾಜನರು ಮತ್ತು ನಿಸರ್ಗ ಪ್ರಿಯರು ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕೋಡಿಯ ಕಡಲ ತೀರವನ್ನು ಸ್ವಚ್ಛಗೊಳಿಸಿದರು.

Click here

Click Here

Call us

Call us

Visit Now

Call us

Call us

ಸ್ವಚ್ಛ ಮನಸ್ಸುಗಳಿಂದ ನೆರೆವೇರಿಸುತ್ತಿರುವ ಈ ಸ್ವಚ್ಚತಾ ಅಭಿಯಾನ, ಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಪರಿಸರದ ಸದ್ಭಳಿಕೆ ಮತ್ತು ಸಂರಕ್ಷಣೆಯ ಕುರಿತು ಕೆಲಸ ಮಾಡುವ ಪ್ರವೃತ್ತಿಯನ್ನು ಹುಟ್ಟುಹಾಕುವದೆಂಬ ನಂಬಿಕೆ ಮತ್ತು ವಿಶ್ವಾಸವನ್ನು ಬ್ಯಾರೀಸ್ ವಿದ್ಯಾ ಸಂಸ್ಥೆಗಳ ಛೇರ್ಮನ್ ಸಯ್ಯದ್ ಮಹಮದ್ ಬ್ಯಾರಿಯವರು ವ್ಯಕ್ತಪಡಿಸಿದ್ದಾರೆ.

ಈ ಕಾರ್ಯದಲ್ಲಿ ನಿರಂತರವಾಗಿ ನಮಗೆ ಸಹಕಾರವನ್ನು ನೀಡುತ್ತಿರುವ ಕುಂದಾಪುರ ಪುರಸಭೆಯ ಚೀಫ್ ಆಫೀಸರ್ ಹಾಗೂ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ಸಿಬ್ಬಂದಿವರ್ಗದವರಿಗೆ, ಕೋಟೇಶ್ವರದ ಗ್ರಾಮ ಪಂಚಾಯತಿಯ ಪದಾಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

12 + 3 =