ಸ್ವಾತಂತ್ರ್ಯೋತ್ಸವ: ಬ್ಯಾರೀಸ್ ಕಾಲೇಜು ಕೋಡಿ

Call us

ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಸಿನಲ್ಲಿ 69ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಿಸಲಾಯಿತು.

Call us

ಧ್ವಜಾರೋಹಣಗೈದ ಶ್ರೀನಿವಾಸ ಶೆಣೈ ಮಾತನಾಡಿ ಜಾತಿ, ಮತ, ಪಂಥ ಬೇಧ ತೊಲಗದೆ ದೇಶದ ಅಭಿವೃದ್ದಿ ಸಾಧ್ಯವಿಲ್ಲ. ಒಗ್ಗಟಿನ ರಾಷ್ಟ್ರಪ್ರೇಮದಿಂದ ಅಭಿವೃದ್ದಿ ಸಾಧ್ಯವೆಂದರು.

ಹಾಜಿ.ಕೆ ಮೊಹಿದ್ದಿನ್ ಬ್ಯಾರಿ ಅನುದಾನಿತ ಪ್ರೌಢ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರಾದ ಮಾಧವ ಎಂ ಪೂಜಾರಿ ಮಾತನಾಡಿ ಸಾಮರಸ್ಯ ಸೌಹಾರ್ದತೆಯಿಂದ ನವ ಭಾರತದ ನಿರ್ಮಾಣವಾಗಬೇಕು ಎಂದರು.

 ಬ್ಯಾರೀಸ್ ಸಂಸ್ಥೆಯ ಅಧ್ಯಕ್ಷ  ಹಾಜಿ ಮಾಸ್ಟರ್ ಮೆಹಮೂದ್ ರವರು ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಕೋರಿರದು.

ಹಾಜಿ ಕೆ. ಮೊಯಿದ್ದೀನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ ಸದಸ್ಯರುಗಳಾದ  ಅಬ್ದುಲ್ ರೆಹಮಾನ್ ಬ್ಯಾರಿ,  ಅಶ್ರಫ್ ಬ್ಯಾರಿ, ಪುರಸಭಾ ಸದಸ್ಯರುಗಳಾದ ಪ್ರಭಾಕರ್, ಶ್ರೀಮತಿ ಜ್ಯೋತಿ, ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರೊ| ಚಂದ್ರಶೇಖರ್ ದೋಮರವರು ಹಾಗೂ ಸಮೂಹ ಸಂಸ್ಥೆಗಳ ಅಭಿವೃದ್ದಿ ಸಮಿತಿಯ ಸದ್ಯಸರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸುರೇಂದ್ರ ಶೆಟ್ಟಿಯವರು ಕಾರ‍್ಯಕ್ರಮ ನಿರ್ವಹಿಸಿದ್ದು,  ಜಯಶೀಲ ಶೆಟ್ಟಿಯವರು ಸ್ವಾಗತಿಸಿ,  ಬ್ಯಾರೀಸ್ ಸೀ-ಸೈಡ್ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಧ್ಯಾಯರಾದ ಶ್ರೀ ರವೀಂದ್ರ ರವರು ವಂದಿಸಿದರು.

Leave a Reply

Your email address will not be published. Required fields are marked *

fourteen − 1 =