ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಅಂಗಳದಲ್ಲಿ 69ನೇ ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಜರುಗಿತು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಆನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸುನೇತ್ರಾ ಎಸ್. ಕೋಟ್ಯಾನ್, ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷ ರಾಘವೇಂದ್ರ ಕೆ.ಸಿ, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎ.ಎಸ್.ಎನ್. ಹೆಬ್ಬಾರ್, ಡಾ. ಎಚ್. ಎಸ್. ಮಲ್ಲಿ, ಕಿಶೋರ್‌ಕುಮಾರ್ ಬಿ, ಡಾ. ರಾಜಾರಾಮ ಶೆಟ್ಟಿ, ಶಶಿಧರ ಹೆಗ್ಡೆ, ಮನೋಜ್ ನಾಯರ್, ವೆಂಕಟಾಚಲ ಕನ್ನಂತ, ಆವರ್ಸೆ ಮುತ್ತಯ್ಯ ಶೆಟ್ಟಿ, ಸುರೇಶ್ ಆಚಾರ್, ಡಾ. ಬಿ. ಅರ್. ಶೆಟ್ಟಿ, ಸತೀಶ್ ಕೋಟ್ಯಾನ್, ಗೀತಾ ಟಿ.ಬಿ. ಶೆಟ್ಟಿ, ಬಿಂದು ನಾಯರ್, ವಿ. ಆರ್. ಕೆ. ಹೊಳ್ಳ, ರತ್ನಾ ಹೊಳ್ಳ, ಡಾ. ಎಂ. ಎನ್. ಅಡಿಗ, ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ರವಿರಾಜ ಶೆಟ್ಟಿ, ಅನಸೂಯ ಶೆಟ್ಟಿ, ರೇಖಾ ಶೆಟ್ಟಿ ಇಂಟರ‍್ಯಾಕ್ಟ್ ಛೇರ್‌ಮೆನ್ ವೆಂಕಟೇಶ ಪ್ರಭು, ರೋಟರಿ ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.