ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸ್ವಾಭಾವಿಕ ಬದುಕಿನಿಂದ ಅಸ್ವಾಭಾವಿಕ ಬದುಕಿನತ್ತ ಸಮಾಜ ನಡೆಯಿತ್ತಿದೆ. ಪ್ರಕೃತಿ ಜೊತೆಯಲ್ಲೇ ಬದುಕಬೇಕೇ ವಿನಹಾ ಪ್ರಕೃತಿ ವಿರುದ್ಧ ಬದುಕಲಾಗದು. ಸಮಾಜ ಕೃಷಿ ಸಂಸ್ಕೃತಿಯಿಂದ ವಿಮುಕ್ತವಾ ಗುತ್ತಿದ್ದು, ಪ್ಲಾಟ್ ಸಂಸ್ಕೃತಿಗೆ ಬಂದು ಮುಟ್ಟಿದ್ದೇವೆ. ಪೋಷಕರು ಅಂಕ ಪಡೆಯಲಷ್ಟೇ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡುತ್ತಿದ್ದು, ಪರಂಪರೆ ನಮ್ಮ ಅಮೂಲ್ಯ ಗ್ರಂಥಗಳ ಪರಿಚಯಿಸದಿದ್ದರೆ ಪೋಷಕರೂ ಪರಕೀಯರಾಗುವ ಅಪಾಯವಿದೆ. ಹೀಗೆ ಎಚ್ಚರಿಕೆ ನೀಡಿದವರು ಮಂಗಳೂರು ಕೇಮಾರು ಮಠ ಶ್ರೀ ಈಶ ಮಿಠಲದಾಸ ಸ್ವಾಮೀಜಿ. ಬೈಂದೂರು ತಾಲೂಕ್, ಮಾರಣಕಟ್ಟೆ ತೆಂಕೂರು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ವಠಾರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ದೇವಸ್ಥಾನಗಳು ಪ್ರಕೃತಿ ದತ್ತವಾಗಿದ್ದು, ಆಧುನಿಕತೆ ಭರಾಟೆಯಲ್ಲಿ ಶಿಲಾಮಯ, ಸ್ವರ್ಣಮಯ ದೇವಾಲಯಗಳಾಗಿ ಬದಲಾಯಿಸುತ್ತಿರುವುದರಿಂದ ದೇವಸ್ಥಾನದಲ್ಲಿ ಶಕ್ತಿ ನಷ್ಟವಾಗುತ್ತಿದೆ. ನಮ್ಮ ಮಕ್ಕಳನ್ನು ಅಂಕ ಪಡೆಯುವ ಯಂತ್ರಗಳಾಗಿ ರೂಪಿಸುತ್ತಿದ್ದು, ಉಣ್ಣುವ ಅನ್ನ ಎಲ್ಲಿಂದ ಬರುತ್ತದೆ ಎನ್ನುವ ಕನಿಷ್ಠ ಜ್ಞಾನ ಕೂಡಾ ಇಲ್ಲದಿರುವುದರಿಂದ ಮಕ್ಕಳಿಗೆ ಕೃಷಿ ಪಾಠ ಕಲಿಸದಿದ್ದರೆ, ಮುಂದಿನ ದಿನಗಳಲ್ಲಿ ಪರಿತಪಿಸುವ ದಿನ ಬರಲಿದೆ ಎಂದು ಭವಿಷ್ಯ ಹೇಳಿದರು.
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅನುವಂಶೀಯ ಮೊಕ್ತೇಸರ ಸದಾಶಿವ ಶೆಟ್ಟಿ, ಮಾರಣಕಟ್ಟೆ ದೇವಸ್ಥಾನ ಅರ್ಚಕ ವೇ.ಮೂ.ದಿವಾಕರ ಉಡುಪ, ನಾಗರಾಜ ಮಂಜುರು, ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಅರ್ಚಕ ವೇ.ಮೂ. ಶಂಕರ ಮಂಜರು, ವಂಡ್ಸೆ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ಶೆಟ್ಟಿ ಇದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ವಿವಿಧ ರೂಪದಲ್ಲಿ ಸಹಕಾರ ನೀಡಿದ ಉದ್ಯಮಿ ಕೃಷ್ಣಮೂರ್ತಿ ಮಂಜರ ಸಹೋದರ ನಾಗರಾಜ ಮಂಜ, ಮಾರಣಕಟ್ಟೆ ದೇವಸ್ಥಾನ ಅರ್ಚಕ ವೇ.ಮೂ.ದಿವಾಕರ ಉಡುಪ, ಶ್ರೀ ವನದುರ್ಗಾ ದೇವಸ್ಥಾನ ಅರ್ಚಕ ಶಂಕರ ಮಂಜರು,ವೆಂಕಟೇಶ್ ನಾಯ್ಕ್, ಚಿತ್ತೂರು ಗ್ರಾಪಂ ಅಧ್ಯಕ್ಷ ಸಂತೋಷ ಮಡಿವಾಳ, ತಾಪಂ ಸದಸ್ಯ ಉದಯ ಪೂಜಾರಿ, ಚಂದ್ರಶೇಖರ ಶೆಟ್ಟಿ, ಸಣ್ಣಯ್ಯ ನಾಯ್ಕ್, ಗಿರಿಜಾ ದೇವಾಡಿಗ, ಭಾಸ್ಕರ ದೇವಾಡಿಗ, ಮಂಜು ನಾಯ್ಕ್, ಗುರು ಆಲೂರು, ಪ್ರಕಾಶ್ ದೇವಾಡಿಗ, ಲಚ್ಚಾ ನಾಯ್ಕ್, ರಾಜೀವ ಶೆಟ್ಟಿ ಮುಂತಾದವರ ಕೇಮಾರು ಸ್ವಾಮೀಜಿ ಗೌರವಿಸಿದರು.
ತೆಂಕೂರು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಆಡಳತ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಾಸು ವಂಡ್ಸೆ ನಿರೂಪಿಸಿದರು.
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಹಟ್ಟಿಯಂಗಡಿ ಯಕ್ಷಗಾನ ಮೇಳದವರಿಂದ ಕೀಚಕ ವಧೆ, ಜಾಂಬವತಿ ಕಲ್ಯಾಣ ಯಕ್ಷಗಾನ ಬಯಲಾಟ ಜರುಗಿತು.