ಉಡುಪಿ ಜಿಲ್ಲಾ ಸ್ವೀಪ್ ಅಭಿಯಾನ: ತ್ರಾಸಿ ಕಡಲತಡಿಯಲ್ಲಿ ಸಮಾಪನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಆಶ್ರಯದಲ್ಲಿ ಒಂದು ತಿಂಗಳಿನಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನ ಶನಿವಾರ ತ್ರಾಸಿ ಕಡಲತೀರದಲ್ಲಿ ವಿಶಿಷ್ಟವಾಗಿ ಸಮಾಪನಗೊಂಡಿತು.

Call us

Call us

Click Here

Visit Now

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧು ಬಿ. ರೂಪೇಶ್, ಜಿಲ್ಲಾ ಪೊಲೀಸ್ ಅಧಿಕಾರಿ ನಿಶಾ ಜೇಮ್ಸ್ ಮತ್ತು ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮವಾಗಲಿ, ಭಾಷಣಗಳಾಗಲಿ ಇರಲಿಲ್ಲ. ಭಾಗವಹಿಸಿದ್ದ ಎಲ್ಲರೂ ಮತದಾನದ ಪಾವಿತ್ರ್ಯ ರಕ್ಷಿಸುವ ಪ್ರತಿಜ್ಞೆ ಸ್ವೀಕರಿಸಿದರು. ಪ್ರಮುಖರು ಬಲೂನ್‌ಗಳನ್ನು ಹಾರಿ ಬಿಡುವುದರ ಮೂಲಕ ಅಭಿಯಾನದ ಸಮಾಪನ ಘೋಷಿಸಿದರು.

Click here

Click Here

Call us

Call us

ಅದರ ಪೂರ್ವದಲ್ಲಿ ಖ್ಯಾತ ಗಾಯಕ ಗಣೇಶ ಗಂಗೊಳ್ಳಿ ಭಾವಗೀತೆಗಳನ್ನು, ಮತದಾನದ ಮಹತ್ವ ಸಾರುವ ಹಾಡುಗಳನ್ನು ಹಾಡಿದರು. ಮರವಂತೆಯ ಕೊರಗ ತನಿಯ ಕಲಾತಂಡದ ಸದಸ್ಯರು ಡೋಲು ವಾದನ ಪ್ರಸ್ತುತ ಪಡಿಸಿದರು. ಕೋಟದ ಯಕ್ಷಪೀಠ ಯಕ್ಷಗಾನ ತಂಡ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡ ’ಮತದಾನ ವಿಜಯ’ ಕಿರು ಯಕ್ಷಗಾನ ಪ್ರದರ್ಶಿಸಿದರು.

ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರು ಮರಳದಂಡೆಯ ಮೇಲೆ ನಿಂತು, ಕುಳಿತು ’ಏಪ್ರಿಲ್ 23’ ಆಕೃತಿಯನ್ನು ರಚಿಸುವುದರ ಮೂಲಕ ಮತದಾನದ ದಿನವನ್ನು ನೆನಪಿಸಿದರು. ಗಾಳಿಪಟ ಹಾರಾಟ, ಹಗ್ಗಜಗ್ಗಾಟ, ಚಮಚೆ-ನಿಂಬೆ ಓಟ ನಡೆದುವು. ಮರಳ ದಂಡೆಯ ಮೇಲೆ ಮತದಾನದ ಮಹತ್ವ ಮತ್ತು ಎಲ್ಲ ಅರ್ಹ ಮತದಾರರು ತಪ್ಪದೆ ಮುಕ್ತ, ನಿರ್ಭೀತ ಮತ ಚಲಾಯಿಸುವ ಅಗತ್ಯವನ್ನು ಬಿಂಬಿಸುವ ಫಲಕಗಳನ್ನು ನೆಡಲಾಗಿತ್ತು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶೇಷಶಯನ ಕಾರಿಂಜ,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರ ಅಧಿಕಾರ ವರ್ಗದವರು ಇದ್ದರು. ಯಕ್ಷಗಾಬನ ಕಲಾವಿದರನ್ನು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರನ್ನು ಗೌರವಿಸಲಾಯಿತು. ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ ನಿರ್ವಹಿಸಿದರು.

Leave a Reply

Your email address will not be published. Required fields are marked *

20 + 12 =