ಹಟ್ಟಿಯಂಗಡಿ ಅತಿಶಯ ಜೈನ ಕ್ಷೇತ್ರಕ್ಕೆ ರೋಟರಿ ಗವರ್ನರ್ ಭೇಟಿ

Call us

ಕುಂದಾಪುರ: ರೋಟರಿ 3180 ಇದರ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಅವರು ರೋಟರಿ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಹಟ್ಟಿಯಂಗಡಿಯ ಅತಿಶಯ ಜೈನಕ್ಷೇತ್ರ ಶ್ರೀ ಚಂದ್ರನಾಥ ಸ್ವಾಮಿ ಜೈನ ಮಂದಿರ ಹಾಗೂ ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

Call us

Call us

ಕ್ಷೇತ್ರಕ್ಕೆ ಆಗಮಿಸಿದ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್, ರೋಟರಿ ಜಿಲ್ಲಾ ಪ್ರಥಮ ಮಹಿಳೆ ಜಯಶ್ರೀ ಭರತೇಶ್ ಅಧಿರಾಜ್, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರನ್ನು ದೇವಳದ ಆಡಳಿತ ಮೋಕ್ತೆಸರರಾದ ಚಂದ್ರ ರಾಜೇಂದ್ರ ಅರಸರು ಕ್ಷೇತ್ರದ ವತಿಯಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ರೋಟರಿ ಸದಸ್ಯರಾದ ಆವರ್ಸೆ ಮುತ್ತಯ್ಯ ಶೆಟ್ಟಿ, ಡಾ. ಛಾಯಾ ವಿ. ಹೆಬ್ಬಾರ್, ಎಚ್. ಎಸ್. ಹತ್ವಾರ್, ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.

News_Rotary governer hattiyangadi visit1

Call us

Call us

Leave a Reply

Your email address will not be published. Required fields are marked *

nineteen − 10 =