ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ಧನಸಹಾಯ

Call us

ಕುಂದಾಪುರ: ಹಟ್ಟಿಯಂಗಡಿ ಪುರಾಣ ಪ್ರಸಿದ್ಧ ಶ್ರೀ ಲೋಕನಾಥೇಶ್ವರ ದೇವಸ್ಥಾನವು ಸುಮಾರು ೩ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಳ್ಳುತ್ತಿದ್ದು, ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಡೆ ದೇವಳದ ಜಿಣೋದ್ಧಾರ ಕಾರ್ಯಕ್ಕೆ 10ಲಕ್ಷ ರೂ. ಚೆಕ್ ನೀಡಿದ್ದಾರೆ.

Call us

Call us

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರರಾಜೇಂದ್ರ ಅರಸ್ ಅವರಿಗೆ ಚೆಕ್ ಹಸ್ತಾಂತರಿಸಿದರು. ಹಟ್ಟಿಯಂಗಡಿ ಶ್ರೀ ಸಿದ್ಧವಿನಾಯಕ ದೇವಸ್ಥಾನ ಬಾಲಚಂದ್ರ ಭಟ್, ವಲಯ ಯೋಜನಾಧಿಕಾರಿ ಸನತ್‌ಕುಮಾರ್ ರೈ, ಒಟ್ಟೂಟ ಅಧ್ಯಕ್ಷ ನಾಗರಾಜ್, ಕನ್ಯಾನ ಒಕ್ಕೂಟ ಅಧ್ಯಕ್ಷ ಜಗದೀಶ್ ಆಚಾರ್ಯ, ವಲಯ ಮೇಲ್ವೀಚಾರಕ ನಾಗರಾಜ್, ಸೇವಾ ಪ್ರತಿನಿಧಿ ಕಲಾವತಿ, ಕರುಣಾಕರ ಇದ್ದರು.

2015 ಮಾರ್ಚ್‌ನಲ್ಲಿ ದೇವಳದ ಜೀಣೋದ್ಧಾರದ ಸಲುವಾಗಿ ದೇವರ ಕಳೆ ಇಳಿಸಲಾಯಿತು. ಜೀರ್ಣೋದ್ಧಾದ್ದುರ ಕಾರ್ಯ ಪ್ರಗತಿಯಲ್ಲಿ 2016ಮಾರ್ಚ್ 23ರಂದು ನಡೆಯುವ ಹಟ್ಟಿಯಂಗಡಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಕಳೆ ಏರಿಸಿದ ಬಳಿಕ ಪುನರ್‌ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. (ಕುಂದಾಪ್ರ ಡಾಟ್ ಕಾಂ)

Call us

Call us

ವರಾಹಿ ನದಿಯ ದಡದಲ್ಲಿರುವ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನಕ್ಕೆ ಸಹಸ್ರ ವರ್ಷಗಳ ಇತಿಹಾಸವಿದೆ. ಒಂದು ಕಾಲದಲ್ಲಿ ಸಾವಿರ ಮುಡಿ ಗೇಣಿ ಬರುತ್ತಿದ್ದು ರಾಜಾಶ್ರಯ ಪಡೆದ ವೈಭವದ ದಿನಗಳನ್ನು ಕಂಡಿತ್ತು. ಶ್ರೀ ಲೋಕನಾಥೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದು. ವೈಭವವನ್ನು ಕಂಡಿದ್ದ ದೇವಸ್ಥಾನ ಕಾಲದ ಹೊಡೆತಕ್ಕೆ ಸಿಕ್ಕಿ ಜೀರ್ಣಾವಸ್ಥೆ ತಲುಪಿದ್ದು ಈಗ ಊರ ಪರವೂರ ಭಕ್ತರ ಸಹಕಾರದಲ್ಲಿ ನೂತನ ಶಿಲಾಮಯ ದೇವಸ್ಥಾನ ನಿರ್ಮಿಸಲು ತಿರ್ಮಾನಿಸಲಾಯಿತು.. ಅದಕ್ಕಾಗಿ ವಿವಿಧ ಜೀಣೋದ್ಧಾರ ಸಮಿತಿಗಳನ್ನು ರಚಿಸಲಾಗಿದೆ

Leave a Reply

Your email address will not be published. Required fields are marked *

11 + two =