ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವದ ಅಂಗವಾಗಿ ಶ್ರೀ ದೇವರಿಗೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಅವರ ಮಾರ್ಗದರ್ಶನದಲ್ಲಿ ಲಕ್ಷ ದೂರ್ವಾರ್ಚನೆ, ಸಿಂದೂರಾರ್ಚನೆ ನೆರವೇರಿತು.
ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುರತ್ಕಲ್ನ ಜೆ. ಡಿ. ವೀರಪ್ಪ ಅವರಿಂದ ದೇವಳಕ್ಕೆ ಪುಸ್ಷಲಂಕಾರ ಸೇವೆ ನಡೆಯಿತು.
ಹಟ್ಟಿಯಂಗಡಿ ಶ್ರೀ ಸಿದೀವಿನಾಯ ದೇವರ ಸನ್ನಿಧಿಯಲ್ಲಿ ಜರುಗಿದ ಲಕ್ಷ ದೂರ್ವಾರ್ಚನೆ
