ಹಟ್ಟಿಯಂಗಡಿ ಸಿದ್ಧಿವಿನಾಯಕ ಶಾಲೆಯಲ್ಲಿ ಶಿಕ್ಷಕರ ಪುನರ್‌ಚೈತನ್ಯಾ ಕಾರ್ಯಾಗಾರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಶಿಕ್ಷಣ ಸಂಸ್ಥೆಯೊಂದು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ. ಶಿಕ್ಷಕರ ಬೋಧನೆಯ ಮೇಲೆ ವಿದ್ಯಾರ್ಥಿಗಳ ಕಲಿಕೆ ನಿರ್ಧಾರವಾಗುವುದರಿಂದ ಶಿಕ್ಷಕರಿಗೆ ಪುನರ್‌ಚೈತನ್ಯ ನೀಡುವುದು ಅಗತ್ಯವಾಗಿರುತ್ತದೆ. ಈ ಉದ್ದೇಶದಿಂದ ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಯಂಗಡಿಯಲ್ಲಿ ಶಿಕ್ಷಕರಿಗೆ ಮೂರು ದಿನಗಳ ಪುನರ್‌ಚೈತನ್ಯ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

Click Here

Call us

Call us

Visit Now

ಈ ಕಾರ್ಯಾಗಾರದಲ್ಲಿ ಬೆಂಗಳೂರಿನ ವಿವಾ ಪಬ್ಲಿಕೇಷನ್‌ರವರು ಆಯೋಜಿಸಿದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ದಯಾ ಎಸ್. ಉನ್ನಿ ಹಾಗೂ ಆಪ್ತಸಮಾಲೋಚನಾ ಮನಃಶಾಸ್ತ್ರಜ್ಞೆ ದೀಕ್ಷಾ ಎಸ್. ಉನ್ನಿ ಇವರುಗಳು ಶಿಕ್ಷಕರಿಗೆ ನಾಯಕತ್ವ ಕೌಶಲ, ತಂಡ ರಚನೆ, ತರಗತಿ ಕೋಣೆಯ ನಿರ್ವಹಣೆ, ಪಾಠಯೋಜನೆಯ ಹಂತಗಳಂತಹ ಉಪಯುಕ್ತ ಅಂಶಗಳ ಬಗ್ಗೆ ವಿವಿಧ ಚಟುವಟಿಕೆಗಳ ಮೂಲಕ ಮಾಹಿತಿ ಒದಗಿಸಿಕೊಡುವುದರ ಮೂಲಕ ತರಬೇತಿ ನೀಡಿದರು.

Click here

Click Here

Call us

Call us

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಇವರು ಶಿಕ್ಷಕರನ್ನು ಉದ್ದೇಶಿಸಿ ಶಿಕ್ಷಕರು ಇಂತಹ ಪುನರ್‌ಚೈತನ್ಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಸಂಸ್ಥೆಗೆ ಉತ್ತಮ ಸೇವೆಯನ್ನು ನೀಡುವುದರ ಜೊತೆಗೆ ಸಮಾಜಕ್ಕೆ ಪ್ರಜೆಗಳನ್ನು ನೀಡಲು ಸಾಧ್ಯವಾಗುತ್ತದೆ. ಹಾಗೆ ಶಿಕ್ಷಕರಿಗೆ ತಮ್ಮಲ್ಲಿರುವ ಹೊಸ ವಿಚಾರಗಳನ್ನು ಅಭಿವ್ಯಕ್ತಿ ಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳುವುದರೊಂದಿಗೆ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸಿದರು. ಈ ಕಾರ್ಯಾಗಾರದಲ್ಲಿ ವಿವಾ ಪಬ್ಲಿಕೇಷನ್‌ನ ಅಧಿಕಾರಿಗಳಾಗಿರುವ ಡೆರೆನ್ ಹಾಗೂ ರಾಕೇಶ್ ರೈ ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ten + eleven =