ಹಟ್ಟಿಯಂಗಡಿ: 1008 ತೆಂಗಿನ ಕಾಯಿ ಮಹಾಗಣಪತಿ ಹವನ, 108 ಶ್ರೀ ಸತ್ಯಗಣಪತಿ ವ್ರತ ಸಂಪನ್ನ

Call us

Call us

ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವವು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಗವಾಗಿ ನೆರವೇರಿತು.

Call us

Call us

Visit Now

ಸೆ.17ರಂದು ಬೆಳಿಗ್ಗೆ 8ರಿಂದ ಶ್ರೀ ಮಹಾಗಣಪತಿ ಹೋಮ ಸಂಕಲ್ಪ, ಮಧ್ಯಾಹ್ನ 12ಕ್ಕೆ 1008 ತೆಂಗಿನ ಕಾಯಿ ಮಹಾಗಣಪತಿ ಹವನದ ಪೂರ್ಣಾಹುತಿ, ಮಹಾ ಪೂಜೆ ವಿದ್ಯುಕ್ತವಾಗಿ ಋತ್ವಿಜರ ವೇದ ಮಂತ್ರಘೋಷಗಳೊಂದಿಗೆ ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ರಾತ್ರಿ ರಂಗಪೂಜಾದಿ ಸೇವೆಗಳು ಜರುಗಿತು.

Click here

Call us

Call us

ಸತ್ಯಗಣಪತಿ ವ್ರತ : ಸೆ. 18ರಂದು ಬೆಳಿಗ್ಗೆ 10ಕ್ಕೆ 108 ಶ್ರೀ ಸತ್ಯಗಣಪತಿ ವ್ರತ ಹಾಗೂ ಕಥಾ ನಿರೂಪಣೆ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಸೃಷ್ಠಿ ಕಲಾಕುಟೀರ, ಉಡುಪಿ ಇವರಿಂದ ನೃತ್ಯ ವೈವಿಧ್ಯ, ಭಸ್ಮಾಸುರ ಮೋಹಿನಿ ನೃತ್ಯ ರೂಪಕ, ಕೂಚುಪುಡಿ, ಜಾನಪದ ನೃತ್ಯಗಳು ಕಲಾತ್ಮಕವಾಗಿ ಮೂಡಿ ಬಂದವು.Hattiyangadi

Leave a Reply

Your email address will not be published. Required fields are marked *

sixteen − 8 =