ಹಣ, ಚಿನ್ನಕ್ಕಾಗಿ ಸಂಬಂಧಿಯ ಕೊಲೆ. ಆರೋಪಿ ನರಸಿಂಹ ನಾಯ್ಕ್ ಬಂಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ

Call us

Call us

ಕುಂದಾಪುರ: ತಾಲೂಕಿನ ನಾವುಂದ ಗ್ರಾಮದ ಪಡುವಾಯಿನ ಮನೆ ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಮಾಧವ ಪೂಜಾರಿ ಎಂಬುವವರನ್ನು ಕಡಿದು ಕೊಲೆಗೈದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಧವ ಪೂಜಾರಿ ಅವರ ಸಂಬಂಧಿ ನರಸಿಂಹ ನಾಯ್ಕ್ (45) ಕೊಲೆಗೈದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಘಟನೆಯ ವಿವರ:
ನಾವುಂದ ಪಡುವಾಯಿನ ಮನೆ ಎಂಬಲ್ಲಿ ಕಳೆದ ೩ ವರ್ಷಗಳಿಂದ ಒಬ್ಬಂಟಿಯಾಗಿ ನೆಲೆಸಿದ್ದ ಮಾಧವ ಪೂಜಾರಿ ಎಂಬುವವರು ಮೈಸೂರಿನಿಂದ ಮಗಳು ಬರುವ ವೇಳೆಗೆ ಮನೆಯಲ್ಲಿಯೇ ಕೊಲೆಯಾಗಿ ಬಿದ್ದಿದ್ದರು. ಈ ಆಘಾತಕಾರಿ ಪ್ರಕರಣದಿಂದಾಗಿ ಜನತೆಗೆ ನಡುಕ ಹುಟ್ಟಿಸಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಮೂರು ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Call us

ಏನಾಗಿತ್ತು?
ಅಂದುರಾತ್ರಿ ೯:೩೦ರ ಸುಮಾರಿಗೆ ಮಾಧವ ಪೂಜಾರಿ ಮನೆಗೆ ತೆರಳಿದ್ದ ಆರೋಪಿ ಹಣಕ್ಕಾಗಿ ಅವರ ಹಲ್ಲೆ ನಡೆಸಿದ್ದಾರೆ. ಹೊಡೆತದಿಂದ ನೆಲಕ್ಕುರುಳಿತ ಅವರನ್ನು ಕತ್ತಿಯಿಂದ ಕಡಿದು ಬಳಿಕ ಹಣ, ಒಡವೆಗಾಗಿ ಮನೆಯನ್ನು ತಡಕಾಡಿದ್ದಾನೆ. ಕೊನೆಗೆ ಏನೂ ಸಿಗದಿದ್ದಾಗ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಉಂಗುರ ಹಾಗೂ ಒಂದಿಷ್ಟು ಚಿಲ್ಲರೆ ಹಣವನ್ನು ತೆಗೆದುಕೊಂಡು, ಮೊಬೈಲ್, ವಾಚ್‌ಗಳನ್ನು ಮನೆಯ ಹತ್ತಿರವೇ ಹೂತಿಟ್ಟು ಬಳಿಕ ಎದುರಿನ ಬಾಗಿಲಿಗೆ ಬೀಗ ಜಡಿದಿದ್ದಾನೆ. ಬೀಗದ ಕೈಯನ್ನು ಒಳಗಿನಿಂದ ತಂದಿದ್ದ ಪರ್ಸ್ ಒಳಗೆ ಹಾಕಿ ಬಾವಿಗೆ ಎಸೆದು, ತನ್ನ ರಕ್ತಸಿಕ್ತ ಅಂಗಿಯನ್ನು ಅಲ್ಲಿಯೇ ನೀರಿನಲ್ಲಿ ತೊಳೆದುಕೊಂಡು ಮನೆಗೆ ತೆರಳಿದ್ದಾನೆ. ಪ್ರಕರಣದ ಹಾದಿ ತಪ್ಪಿಸುವ ಸಲುವಾಗಿ ಎಣ್ಣೆಯನ್ನು ಚಲ್ಲಿ ಹೋಗಿದ್ದ. ಕುಂದಾಪ್ರ ಡಾಟ್ ಕಾಂ ಸುದ್ದಿ

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ಮೂಲತಃ ಸಿರಸಿಯವನಾದ ನರಸಿಂಹ ನಾವುಂದದ ಹೆಂಡತಿ ಮನೆಯಲ್ಲಿಯೇ ವಾಸವಿದ್ದು, ಕೆಲಸಕಾರ್ಯವಿಲ್ಲದೇ ತಿರುಗಾಡುತ್ತಿದ್ದ. ಹಾಗಾಗಿ ಒಬ್ಬಂಟಿಯಾಗಿದ್ದ ಮಾಧವ ಪೂಜಾರಿ ಅವರಿಂದ ಹಣ ಎಗರಾಯಿಸಬಹುದು ಎಂಬ ಆಲೋಚನೆಯಿಂದ ರಾತ್ರಿ ಅವರ ಮನೆಗೆ ತೆರಳಿ ಈ ಕುಕೃತ್ಯ ಎಸಗಿದ್ದಾನೆ, ಮಾಧವ ಪೂಜಾರಿ ಅವರ ಮೇಲೆ ಹಲ್ಲೆಮಾಡಲು ಹೋದಾಗ ನರಸಿಂಹನ ಮುಖದ ಹಾಗೂ ಮೈಮೇಲೆ ಉಗುರಿನಿಂದ ಪರಚಿದ್ದ ಗಾಯವಾಗಿತ್ತು. ಇದನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ನರಸಿಂಹನ ಹೇಳಿಗೆಗೂ ಹಾಗೂ ಅವರ ಮನೆಯವರ ಹೇಳಿಕೆಗೂ ವ್ಯತ್ಯಾಸ ಕಂಡುಬಂದಿತ್ತು. ಅದಲೇ ಸಂಶಯ ಬಲಗೊಂಡದ್ದರಿಂದ ತೀವ್ರ ವಿಚಾರಣೆಗೊಳಪಡಿಸಿದಾಗ ಆರೋಪಿ ಸತ್ಯ ಒಪ್ಪಿಕೊಂಡಿದ್ದ. ಕುಂದಾಪ್ರ ಡಾಟ್ ಕಾಂ ಸುದ್ದಿ

ಅನೈತಿಕ ಸಂಬಂಧವಿತ್ತೆ?
ಈ ನಡುವೆ ನಾವುಂದದಲ್ಲಿ ಒಬ್ಬಂಟಿಯಾಗಿದ್ದ ಮೃತ ಮಾಧವ ಪೂಜಾರಿಗೆ ಹೆಂಗಸೋರ್ವಳೊಂದಿಗೆ ಅನೈತಿಕ ಸಂಬಂಧವಿತ್ತೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಇದನ್ನು ತಿಳಿದಿದ್ದ ನರಸಿಂಹ ಅದೇ ವಿಚಾರದಲ್ಲಿ ಮಾಧವ ಪೂಜಾರಿ ಅವರೊಂದಿಗೆ ಜಗಳಕ್ಕಿಳಿದಿದ್ದ ಎಂಬ ಮಾತುಗಳೂ ಕೇಳಿಬರುತ್ತಿದೆ. ಘಟನೆ ನಡೆದಾಗ ಶವ ದೊರೆತ ಸ್ಥಿತಿಯೂ ಇದನ್ನು ಪುಷ್ಠಿಕರಿಸುವಂತಿತ್ತು. ಆದರೆ ಈ ವಿಚಾರ ಅಧಿಕೃತವಾಗಿ ಎಲ್ಲಿಯೂ ಬಹಿರಂಗವಾಗಿಲ್ಲ.

ಉಡುಪಿ ಪೋಲಿಸ್ ವರಿಷ್ಟಾಧಿಕಾರಿ ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಬೈಂದೂರುಠಾಣಾಧಿಕಾರಿ ಸಂತೋಷಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಅವರನ್ನೊಳಗೊಂಡ ತಂಡವನ್ನು ಕ್ಷಿಪ್ರಗತಿಯಲ್ಲಿ ತನಿಕೆ ನಡೆಸಿ ಆರೋಪಿಯನ್ನು ಬಂಧಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: ನಾವುಂದ: ಮಾರಕಾಯುಧಗಳಿಂದ ಹೊಡೆದು ವ್ಯಕ್ತಿಯ ಕೊಲೆ – http://kundapraa.com/?p=12283

Navunda Madav Poojary murder case Aquest arrested (4)Navunda Madav Poojary murder case Aquest arrested (1) Navunda Madav Poojary murder case Aquest arrested (2) Navunda Madav Poojary murder case Aquest arrested (3)

Leave a Reply

Your email address will not be published. Required fields are marked *

twelve + 7 =