ಹದಗೆಟ್ಟ ಬಿಜೂರು ಶಾಲಾ ರಸ್ತೆ: ದುರಸ್ಥಿಗೆ ಸ್ಥಳೀಯರ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ೩ನೇ ವಾರ್ಡ್‌ನ ಬಿಜೂರು ಶಾಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಹದಗೆಟ್ಟಿದ್ದು ಇದುವರೆಗೆ ದುರಸ್ತಿಗೊಂಡಿಲ್ಲ.

ರಾ. ಹೆದ್ದಾರಿ66ರಿಂದ ಹಾದುಹೋಗುವ ರಸ್ತೆಯು ಹೊಂಡಗಳಿಂದ ಕೂಡಿದ್ದು ಸಂಪೂರ್ಣ ಹದಗೆಟ್ಟಿದೆ. ಇದೇ ಮಾರ್ಗದಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತಿದ್ದು. ಮಳೆಗಾಲದಲ್ಲಿ ದೊಡ್ಡ ಗಾತ್ರದ ಹೊಂಡಗಳು ಉಂಟಾಗಿದ್ದು ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ

ಈ ರಸ್ತೆಯು ಬಿಜೂರು ಸರಕಾರಿ ಪೌಢಶಾಲೆ, ಹಿರಿಯ ಪಾಥಮಿಕ ಶಾಲೆ, ಪುರಾಣ ಪ್ರಸಿದ್ದ ಮೂರ‍್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೇವಸ್ಥಾನ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅರೆಕಲ್ಲು ಶ್ರೀ ಹಿರೇಮಾಲಿಂಗೆಶ್ವರ ದೆವಸ್ಥಾನಕ್ಕೆ ಸಂಪರ್ಕ ಕೊಂಡಿಯಾಗಿದೆ ಸುಮನಾವತಿ ಸೇತುವೆ ಮೂಲಕ ತಗ್ಗರ್ಸೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ

ಶಾಸಕರಿಗೆ ಮನವಿ:
ರಸ್ತೆಯ ದುರವಸ್ಥೆಯ ಬಗ್ಗೆ ಬೈಂದೂರು ಶಾಸಕರಾದ ಬಿ. ಎಂ ಸುಕುಮಾರ್ ಶೆಟ್ಟಿಯವರಿಗೆ ಸ್ಥಳಿಯರು ಮನವಿ ಸಲ್ಲಿಸಿದ್ದು, ಇತ್ತೀಚಿಗೆ ಸ್ಥಳಕ್ಕೆ ಆಗಮಿಸಿದ ಶಾಸಕರು ರಸ್ತೆಯ ದು:ಸ್ಥಿಯನ್ನು ಪರಿಶೀಲಿಸಿ ಮಾತನಾಡಿ, ಸೂಕ್ತ ಅನುದಾನ ಮಂಜೂರು ಮಾಡಿ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

 

 

Leave a Reply

Your email address will not be published. Required fields are marked *

3 + two =