ಹದಿವಯಸ್ಸು ಮತ್ತು ಮನಸ್ಸು ಉಪನ್ಯಾಸ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗ೦ಗೊಳ್ಳಿ: ಹರೆಯದಲ್ಲಿ ವಿರುದ್ಧ ಲಿಂಗಿಗಳೆಡೆಗೆ ಆಕರ್ಷಣೆ ಸಹಜವಾದದ್ದು. ಆದರೆ ಆಕರ್ಷಣೆಯನ್ನು ತಪ್ಪಾಗಿ ಭ್ರಮಿಸಿಕೊಂಡು ನಮ್ಮ ಜೀವನವನ್ನು ಚಿಕ್ಕ ವಯಸ್ಸಿನಲ್ಲೇ ಅನಾಕರ್ಷಕವನ್ನಾಗಿ ಮಾಡಿಕೊಳ್ಳಬಾರದು. ನಮ್ಮ ಇತಿಮಿತಿಗಳ ಅರಿವು ನಮಗಿರಬೇಕು ಎಂದು ಗಂಗೊಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಹದಿಹರೆಯದ ಸಮಸ್ಯೆಗಳ ಕುರಿತಂತೆ ಅರಿವು ಮೂಡಿಸಲು ವಿಶೇಷವಾಗಿ ಹಮ್ಮಿಕೊ೦ಡಿದ್ದ ಹದಿವಯಸ್ಸು ಮತ್ತು ಮನಸ್ಸು ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ದೈಹಿಕ ಅಥವಾ ಮಾನಸಿಕ ಸಮಸ್ಯೆಗಳು ಕಾಣಸಿಕೊಂಡಾಗ ಅದನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ನಡೆಸಬಾರದು. ಅಸಡ್ಡೆಯನ್ನೂ ಮಾಡಬಾರದು. ಸೂಕ್ತ ತಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು.ವೈದ್ಯರ ಬಳಿ ಮುಚ್ಚುಮರೆ ಬೇಡ ಎಂದು ಅವರು ಸಲಹೆ ನೀಡಿದರು.

Call us

ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಜ್ವಲಾ, ಉಪನ್ಯಾಸಕರಾದ ಸುಮತಿ ಉಡುಪ, ಪ್ರತಿಮಾ,ಪ್ರಮೀಳ ಉಪಸ್ಥಿತರಿದ್ದರು.. ಉಪನ್ಯಾಸಕಿ ಸುಗುಣ ಆರ್ ಕೆ ಕಾರ‍್ಯಕ್ರಮ ನಿರ್ವಹಿಸಿದರು. ಶಾಲೆಟ್ ಲೋಬೊ ವ೦ದಿಸಿದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Leave a Reply

Your email address will not be published. Required fields are marked *

five × three =