ಹದಿಹರೆಯದ ಮಕ್ಕಳ ಜಾಗೃತಿ ಕಾರ‍್ಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್‌ಆಂಗ್ಲ ಮಾಧ್ಯಮ ಶಾಲೆಯಲ್ಲಿ ’ಹದಿಹರೆಯದ ಜಾಗೃತಿ ಕಾರ‍್ಯಾಗಾರ’ ನೆರವೇರಿತು.

ಕಾರ‍್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ, ಡಾ| ರವೀಂದ್ರ ತಲ್ಲೂರು, ಡಾ| ಅಮ್ಮಾಜಿ ಮತ್ತು ಡಾ| ವಿಜಯಲಕ್ಷೀ ಆಗಮಿಸಿದ್ದರು. ಕಾರ‍್ಯಾಗಾರದಲ್ಲಿ ಮಾತನಾಡಿದ ಡಾ| ರವೀಂದ್ರರವರು ಲೈಂಗಿಕ ಶಿಕ್ಷಣದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ದೂರವಾಗಬೇಕು. ಲೈಂಗಿಕ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ ಎಂದರು. ಹಾಗೆಯೇ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ನಮಗೆ ನಮ್ಮ ದೇಹದ ಪ್ರತಿಯೊಂದೂ ಅಂಗಗಳ ಬಗ್ಗೆ ಇರಬೇಕಾದ ಅರಿವು, ಗುಪ್ತಾಂಗಗಳ ರಕ್ಷಣೆ, ಹದಿಹರೆಯದವರಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ವಿಷಯವಾಗಿ ಮಾಹಿತಿ ನೀಡಿದರು.

ಉಪ ಪ್ರಾಂಶುಪಾಲರಾದ ಶುಭಾ.ಕೆ.ಎನ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಅನಿತಾ ಆಲಿಸ್ ಡಿಸೋಜಾ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಶಿಕ್ಷಕಿ ಕವಿತಾ ಭಟ್‌ಉಪಸ್ಥಿತರಿದ್ದರು.

ಶಿಕ್ಷಕ ಲಕ್ಷ್ಮೀಗಣೇಶ್ ಕಾರ‍್ಯಕ್ರಮವನ್ನು ನಿರೂಪಿಸಿ, ಶ್ರೀನಿವಾಸ್ ಬೈಂದೂರು ವಂದಿಸಿದರು.

 

Leave a Reply

Your email address will not be published. Required fields are marked *

3 × two =