ಹದಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳು: ಉಪನ್ಯಾಸ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುತ್ ರೆಡ್ ಕ್ರಾಸ್ ವಿಭಾಗ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೋವರ್ಸ್ ಘಟಕಗಳ ಸಹಯೋಗದಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳು ಕುರಿತು ಕುಂದಾಪುರದ ಮನೀಶ್ ಆಸ್ಪತ್ರೆಯ ಪ್ರಸೂತಿ ಮೆತ್ತು ಸ್ತ್ರೀರೋಗ ತಜ್ನೆ ಡಾ.ಪ್ರಮೀಯಾ ನಾಯಕ್ ಮಾತನಾಡಿದರು.

Call us

Call us

ಆಧ್ಯಾತ್ಮ ಮತ್ತು ನೈತಿಕ ಶಿಕ್ಷಣದ ಮಹತ್ವವು ಹದಿಹರೆಯದ ಸಮಸ್ಯೆಗಳ ನೀಗಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಏಕೆಂದರೆ ಜೀವನದ ಗುರಿ ಮತ್ತು ಅದನ್ನು ತಲುಪುವಲ್ಲಿ ನಿರ್ಧಾರಗಳು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಅವಲಂಬಿಸಿದೆ. ಕಠಿಣ ಪರಿಶ್ರಮ, ಸಾಧಿಸುವ ಛಲ, ದೇವರಲ್ಲಿ ನಂಬಿಕೆ ಸಮಾಜದಲ್ಲಿ ಹೆಣ್ಣಿನ ಪಾತ್ರವನ್ನು ಕುರಿತು ಹೇಳಿದರು. ಅಲ್ಲದೇ ಹದಿಹರೆಯದ ಸಮಸ್ಯೆಗಳಾದ ಖಿನ್ನತೆ, ಮತ್ತು ಅದಕ್ಕೆ ಪರಿಹಾರ, ಸರಳ ಜೀವನಕ್ರಮ, ಋತುಸ್ರಾವದ ಸಮಸ್ಯೆಗಳು ಅದಕ್ಕೆ ಕಾರಣಗಳು ಮತ್ತು ವಿದ್ಯಾರ್ಥಿಗಳ ಆರೋಗ್ಯಕ್ರಮದ ಕುರಿತು ಹೇಳಿದರು.

ಈ ಸಂದರ್ಭದಲ್ಲಿ ಭಾರತೀಯ ಯುತ್ ರೆಡ್ ಕ್ರಾಸ್ ಕುಂದಾಪುರ ಘಟಕದ ಮುತ್ತಯ್ಯ ಶೆಟ್ಟಿ, ಕಾಲೇಜಿನಲ್ಲಿ ಯುತ್ ರೆಡ್ ಕ್ರಾಸ್ ಘಟಕದ ಪ್ರೊ.ಸತ್ಯನಾರಾಯಣ, ರಾಷ್ಟ್ರೀಯ ಸೇವಾ ಯೋಜನೆಯ ಪ್ರೊ.ಅರುಣ ಎ.ಎಸ್, ಪ್ರೊ.ರಾಮಚಂದ್ರ ಆಚಾರಿ ಮತ್ತು ರೋವರ್ಸ್ ಘಟಕದ ಪಾವನ ಅವರು ಉಪ್ಸ್ಥಿತರಿದ್ದರು.

Call us

Call us

 

Leave a Reply

Your email address will not be published. Required fields are marked *

5 × 5 =