ಹಳಗೇರಿ ಪ್ರದೇಶದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿ ಖಂಡಿಸಿ ಜನಾಂದೋಲನದ ಎಚ್ಚರಿಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಹಳಗೇರಿ ಕೈಗಾರಿಕಾ ವಲಯ ಅಭಿವೃದ್ಧಿ ಪಡಿಸುವ ಸಂದರ್ಭ ಪರಂಭೂಕು ಜಾಗವನ್ನು ವಿರಹಿತಗೊಳಿಸುವ ಸಂದರ್ಭದಲ್ಲಿ ರೈತರ ಹಿತಾಸಕ್ತಿಗಳನ್ನು ಮರೆಮಾಚಿ ಏಪಕ್ಷಿಯ ನಿರ್ಣಯ ಕೈಗೊಳ್ಳಲಾಗಿದೆ. ಇದು ಲ್ಯಾಂಡ್ ರೆವೆನ್ಯೂ ಆಕ್ಟ್ ಉಲ್ಲಂಘನೆಯಾಗಿದೆ ಎಂದು ರೈತ ಮುಖಂಡ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Call us

Click here

Click Here

Call us

Call us

Visit Now

Call us

ಅವರು ಹಳಗೇರಿಯ ಸರ್ವೆ ನಂ. 166/ಪಿ1ರ 53 ಎಕರೆ ಜಾಗವನ್ನು ಕೈಗಾರಿಕಾ ವಲಯವಾಗಿ ಅಭಿವೃದ್ಧಿಪಡಿಸಿ ಸೀ ಪುಡ್ ಪಾರ್ಕ್ ಮಾಡುವುದನ್ನು ವಿರೋಧಿಸಿ ನಾಗೂರಿನಲ್ಲಿ ಭಾನುವಾರ ಹಮ್ಮಿಕೊಂಡ ಖಂಡನಾ ಸಭೆ ಉದ್ದೇಶಿಸಿ ಮಾತನಾಡಿದರು.

ಹೋರಾಟದ ನೇತೃತ್ವ ವಹಿಸಿರುವ ನಳೀನ ಕುಮಾರ್ ಶೆಟ್ಟಿ ಮಾತನಾಡಿ ಕೈಗಾರಿಕಾ ವಲಯ ಮಾಡುವ ಹಿಂದೆ ಕೆಲವೇ ಉದ್ಯಮಿಗಳ ಹಿತಾಸಕ್ತಿ ಅಡಗಿದೆ. ಕೈಗಾರಿಕಾ ವಲಯದಿಂದ ಆಗುವ ತೊಂದರೆಗಳ ಬಗ್ಗೆ ಈಗಾಗಲೇ ಸರಕಾರಕ್ಕೆ ತಿಳಿಸಲಾಗಿದೆ. ಸ್ಥಳೀಯನ್ನು ವಿಶ್ವಾಸಕ್ಕೆ ಪಡೆಯದೇ ಕೈಗಾರಿಕಾ ವಲಯ ಮಾಡಿರುವುದು ಸರಿಯಾದ ಕ್ರಮವಲ್ಲ. ಊರಿಗೆ ಇದರಿಂದ ತೊಂದರೆಯೇ ಹೆಚ್ಚಿದೆ. ಕೈಗಾರಿಕಾ ವಲಯ ನಿರ್ಮಾಣದಿಂದ ಹಳಗೇರಿ, ತೆಂಕಬೆಟ್ಟು, ಗುಮ್ಮಿತೋಟ, ಕಂಬದಕೋಣೆ, ನಾಗೂರು, ಚಿತ್ರಾಡಿ, ಗುಂಜಾನುಗುಡ್ಡೆ ಭಾಗದ ಜನರಿಗೆ ತೊಂದರೆಯಾಗಲಿದೆ. ಊರಿನ ಹಿತಾಸಕ್ತಿ ಕಾಯಲು ಚುನಾವಣಾ ಬಹಿ?ರ ಹಾಗೂ ಅಮರಣಾಂತ ಉಪವಾಸಕ್ಕೆ ಸಿದ್ದವಿರುವುದಾಗಿ ತಿಳಿಸಿದರು.

ಶ್ರೀ ವನದುರ್ಗಾ ರೈತಶಕ್ತಿ ಗುಂಪಿನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜನರಿಗೆ ತೊಂದರೆಯಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ವೇಳೆ ಸರಕಾರ ಏಕಪಕ್ಷೀಯ ನಿಲುವು ತಳೆಯುವುದು ಒಳ್ಳೆಯದಲ್ಲ. ಈ ಬಗ್ಗೆ ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಸಭೆಯಲ್ಲಿ ಎಸ್. ಜನಾರ್ದನ ಮರವಂತೆ, ಡಾ. ಸುಬ್ರಹ್ಮಣ್ಯ ಭಟ್ ಸಂಜೀತ್ ರಾವ್, ಈಶ್ವರ ದೇವಾಡಿಗ, ಸುಭಾಶ್ಚಂದ್ರ ಶೆಟ್ಟಿ, ಮೊದಲಾದವರು ಮಾತನಾಡಿದರು.

Call us

ಈ ಸಂದರ್ಭ ಮುಂದಿನ ಹಂತದಲ್ಲಿ ಕೋರ್ಟ್ ಮೂಲಕ ಕಾನೂನು ಹೋರಾಟ ಮುಂದುವರಿಸುವುದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇದರ ಅನಾನುಕೂಲವನ್ನು ತಿಳಿಸುವುದು ಹಾಗೂ ಜನಾಂದೋಲನ ರೂಪಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

Leave a Reply

Your email address will not be published. Required fields are marked *

one × one =