ಹಳಿ ತಪ್ಪಿದ ಆಡಳಿತ ಯಂತ್ರ. ಜನರ ದಿಕ್ಕು ತಪ್ಪಿಸುವ ತಂತ್ರ: ವಿಕಾಸ್ ಹೆಗ್ಡೆ ಆರೋಪ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದೇಶ ಹಾಗೂ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹಳಿತಪ್ಪಿದ್ದು, ಅದನ್ನು ಹಳಿಗೆ ತರುವುದು ಅಷ್ಟು ಸುಲಭವಲ್ಲ ಎನ್ನುವುದು ಬಿಜೆಪಿ ನಾಯಕರುಗಳಿಗೂ ಗೊತ್ತಿದ್ದು, ಈಗ ವಿರೋಧ ಪಕ್ಷದ ನಾಯಕರ ಮೇಲೆ ಆಡಳಿತ ಪಕ್ಷದವರು ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರುವುದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಒಂದು ತಂತ್ರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.

Call us

Call us

ಭಾರತೀಯ ಜನತಾ ಪಕ್ಷದ ನಾಯಕರುಗಳಿಗೆ ಮಾನ, ಮರ್ಯಾದೆ ಇದ್ದರೆ ವಿರೋಧ ಪಕ್ಷದವರ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು ಜನಸಾಮಾನ್ಯರು ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಪಡಲಿ ಅದೆಲ್ಲವನ್ನು ಬಿಟ್ಟು ಅನಾಗರಿಕರಂತೆ ವರ್ತಿಸುವುದು ಸರಿಯಲ್ಲ ಎಂದು ಆಡಳಿತ ಪಕ್ಷವನ್ನು ಟೀಕಿಸಿದರು.

ನಳಿನ್ ಕುಮಾರ್ ಕಟೀಲ್ ಒಬ್ಬ ಬುದ್ಧಿ ಸ್ಥಿಮಿತದಲ್ಲಿ ಇರದ ವ್ಯಕ್ತಿ, ವಿರೋಧ ಪಕ್ಷದ ನಾಯಕರುಗಳ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡಿದ ತಕ್ಷಣ ತಾನು ದೊಡ್ಡ ನಾಯಕನಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಇದ್ದಾರೆ, ರಾಜಕಾರಣದಲ್ಲಿ ಟೀಕೆಗಳು ಸಾಮಾನ್ಯ ಆದರೆ ಅವು ನಾಗರಿಕ ಸಮಾಜ ಒಪ್ಪುವಂತಿರಬೇಕು, ಆದರೆ ನಳಿನ್ ಕುಮಾರ್ ಕಟೀಲ್ ತಮ್ಮ ಮಾತುಗಳ ಮೂಲಕ ತಾನೊಬ್ಬ ಅನಾಗರಿಕ ಎನ್ನುವುದನ್ನು ಸಾಬಿತುಪಡಿಸಿದ್ದಾರೆ. ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

7 + 12 =