ಹಳ್ಳಿಯ ಕಾರ್ಯಕ್ರಮಗಳಿಂದ ದೇಶ ವಿಕಾಸ: ಸಾಹಿತಿ ಬಿ.ಎ.ಸನದಿ

Click Here

Call us

Call us

ಹಳ್ಳಿಯ ಕಾರ್ಯಕ್ರಮಗಳಿಂದ ದೇಶ ವಿಕಾಸ: ಬಿ.ಎ.ಸನದಿ
ಉಡುಪಿ: ಭಾಷೆ, ಶಿಕ್ಷಣ, ಸಂಸ್ಕೃತಿಯನ್ನು ಫೋಷಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಹಳ್ಳಿಯಲ್ಲಿ ನಡೆಯ ಬೇಕು, ಅದರಿಂದ ದೇಶದ ವಿಕಾಸ ಸುಲಭವಾಗುತ್ತದೆ ಎಂದು ಮಾನವ್ಯ ಕವಿ ಪಂಪ ಪುರಸ್ಕೃತ ಸಾಹಿತಿ ಬಿ.ಎ ಸನದಿ ಹೇಳಿದರು.

Call us

Call us

Visit Now

ಅವರು ಹಿರಿಯಡ್ಕ ಸಮೀಪದ ಪಂಚನಬೆಟ್ಟುವಿನಲ್ಲಿ ಪಂಚನಬೆಟ್ಟು ವಿದ್ಯಾವರ್ಧಕ ಸಂಘ ಮತ್ತು ಪ್ರೌಢಶಾಲೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಜೊತೆಗೂಡಿ ಆಯೋಜಿಸಿದ್ದ ಪಂಚನಬೆಟ್ಟು ಸಾಂಸ್ಕೃತಿಕ ಉತ್ಸವದಲ್ಲಿ ಸಂಘದ ಅಧ್ಯಕ್ಷ ಬಿ. ಮೋಹನ್‌ದಾಸ ಶೆಟ್ಟಿ ಅವರ ಸಂಸ್ಮರಣಾ ಗ್ರಂಥ ಸಂಮೋಹನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.ಹಳ್ಳಿಯ ಸುಂದರ ಪರಿಸರದ ಈ ಕಾರ್ಯಕ್ರಮ, ಶೈಕ್ಷಣಿಕ ಸೇವೆ, ಜನರ ಉತ್ಸಾಹ ನನಗೆ ಬಾಲ್ಯದ ನೆನಪನ್ನು ತಂದು ಕೊಟ್ಟಿದೆ. ಎ. ನರಸಿಂಹ ಮತ್ತು ಅಜೆಕಾರು ಅವರ ಒತ್ತಾಸೆಯಿಂದ ಈ ಕಾರ್ಯಕ್ರಮದಲ್ಲಿ ವಯೋಸಹಜ ಆಯಾಸವನ್ನು ಬದಿಗೊತ್ತಿ ಭಾಗವಹಿಸಿದೆ. ಹೊಸ ಹೊರಪು, ಉಲ್ಲಾಸವನ್ನು ಈ ಕಾರ್ಯಕ್ರಮ ನೀಡಿದೆ ಎಂದು ಸನದಿ ಖುಷಿ ಹಂಚಿಕೊಂಡರು. ಉಡುಪಿ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಉತ್ಸವವನ್ನು ದೀಪ ಬೆಳಗಿಸಿ , ಉದ್ಘಾಟಿಸಿ ಪಂಚನಬೆಟ್ಟು ದೊಡ್ಡ ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲಿ ಎಂದು ಹಾರೈಸಿದರು.

Click Here

Click here

Click Here

Call us

Call us

ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಸರ್ವತೋಮುಖ ವಿಕಾಸ ಕಾಣಲು ಸಾಧ್ಯ. ಮೋಹನದಾಸ ಶೆಟ್ಟರಂತಹ ಮೌನ ಸಾಧಕರು ಸರ್ವತ್ರ ಗೌರವಕ್ಕೆ ಪಾತ್ರರಾಗುವವರು, ಅವರ ಕುರಿತ ಕೃತಿಯ ಪ್ರಕಟಣೆ ಒಂದು ಉತ್ತಮ ಕೆಲಸ ಎಂದು ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ, ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್ ಅವರು ಹೇಳಿದರು. ಸಿರಿಗನ್ನಡ ವೇದಿಕೆಯ ಕೇರಳ ಘಟಕದ ಅಧ್ಯಕ್ಷ ವಿ.ಬಿ.ಕುಳಮರ್ವ ಅವರು ಇಂತಹ ಕಾರ್ಯಕ್ರಮಗಳು ಭರವಸೆಯ ಬೆಳಕುಗಳಾಗಿ ನಮಗೆ ಖುಷಿ ಕೊಡುತ್ತವೆ ಎಂದರು.

ಹಳ್ಳಿಯಲ್ಲಿ ೧೮ ವರ್ಷ ಅನುದಾನವಿಲ್ಲದೆ ಮತ್ತು ಒಟ್ಟು ೨೭ ವರ್ಷಗಳಿಂದ ಈ ವಿದ್ಯಾವರ್ಧಕ ಸಂಸ್ಥೆ ಉಚಿತ ಸೇವೆ ನೀಡುತ್ತಾ ಯಶಸ್ವಿಯಾಗಿ ನಡೆದು ಬಂದಿದೆ. ಬಿ. ಮೋಹನದಾಸ ಶೆಟ್ಟರ ಪ್ರೇರಣೆ ನಮಗೆ ಮುಂದೆಯೂ ಸ್ಫೂರ್ತಿಯಾಗಿರ ಬೇಕು ಎಂದು ಸಂಮೋಹನ ಗ್ರಂಥವನ್ನು ಹೊರ ತಂದಿದ್ದೇವೆ ಎಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬೊಮ್ಮರಬೆಟ್ಟು ಎ.ನರಸಿಂಹ ಅಭಿಪ್ರಾಯ ಪಟ್ಟರು.

ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಭುವನಪ್ರಸಾದ್ ಶೆಟ್ಟಿ, ಕವಯತ್ರಿ ಪೂರ್ಣಿಮಾ ಸುರೇಶ್, ಕ.ಸಾ.ಪ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಕ.ಸಾ.ಪ ಪೆರ್ಡೂರು ಹೋಬಳಿ ಅಧ್ಯಕ್ಷ ಚಂದ್ರ ನಾಕ್ ಮತ್ತಿತರರು ಅತಿಥಿಗಳಾಗಿದ್ದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಶೇಖರ ಅಜೆಕಾರು ಆಶಯ ನುಡಿಗಳನ್ನಾಡಿದರು. ಹಿರಿಯ ಬಸ್ ಕಂಡಕ್ಟರ್ ಮೊಹಮ್ಮದ್ ಹುಸೈನ್ ಆತ್ರಾಡಿ, ಯುವ ರಂಗ ಕರ್ಮಿ ಚೇತನ್ ನೀರೆ, ಯುವ ಚಿತ್ರ ಕಲಾವಿದ ದಿವಾಕರ ಸಾಣೆಕಲ್ಲು ಅವರನ್ನು ಗಣ್ಯರು ಸನ್ಮಾನಿಸಿದರು. ಮೊಹಮ್ಮದ್ ಸನ್ಮಾನಿತರ ಪರವಾಗಿ ಮಾತನಾಡಿ ಇದೊಂದು ವಿಶೇಷ ಗಳಿಗೆ, ಕಂಡಕ್ಟರ್ ಆಗಿ ಸಲ್ಲಿಸಿದ ಸೇವೆಗೂ ಈ ರೀತಿ ಸನ್ಮಾನ ಮಾಡಿದ್ದನ್ನು ಜೀವಮಾನದಲ್ಲಿ ಮರೆಯಲಾರೆ ಎಂದರು.ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮೋಹನದಾಸ ಅವರ ಪತ್ನಿ ಪದ್ಮಲತಾ, ಮಗ ಅಜಿತ್ ,ಮಗಳು ಅಮಿತಾ ಕುಟುಂಬಿಕರು ಮತ್ತು ಪಂಚಾಯತ್ ಅಧ್ಯಕ್ಷೆ ಮಾಲತಿ ಆಚಾರ್ಯ ಉಪಸ್ಥಿತರಿದ್ದರು. ಮತೇಕತೆ ಮಕ್ಕಳ ವಿಶೇಷ ಸಭೆ ಪ್ರದ್ಯಮ್ನಮೂರ್ತಿ ಕಡಂದಲೆ ಅವರ ಅಧ್ಯಕ್ಷತೆಯಲ್ಲಿ ಕವಯತ್ರಿ ಅವನಿ ಉಪಾಧ್ಯಾ, ಮೇಧಾ ಎನ್ ಭಟ್ ನಾಯರ್‌ಪಳ್ಳ ಕಾಸರಗೋಡು, ಶ್ರದ್ಧಾ ಎನ್ ಭಟ್ ನಾಯರ್‌ಪಳ್ಳ ಅವರ ಸುಂದರ ಮಾತುಗಳೊಂದಿಗೆ ಮೂಡಿ ಬಂತು. ಶೇಖರ ಅಜೆಕಾರು ನಿರ್ವಹಿಸಿದ ಮಾತೇಕತೆಯಲ್ಲಿ ಸುನಿಧಿ ಅತಿಥಿಗಳನ್ನು ಗೌರವಿಸಿದರು. ಯುವ ಕಾರ್ಯಕ್ರಮ ಸಂಯೋಜಕ ಸುದೇಶ್ ಜೈನ್ ಮಕ್ಕಿಮನೆ ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯ ರಮೇಶ್ ಶೆರ್ವೇಗಾರ್ ಸ್ವಾಗತಿಸಿದರು. ಶಿಕ್ಷಕ ಮನೋಹರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಶ್ರಧ್ಧಾ ಎನ್ ಭಟ್ ಅವರ ಗಮಕವಾಚನಕ್ಕೆ ವಿ.ಬಿ ಕುಳವರ್ಮ ವ್ಯಾಖ್ಯಾನವಿತ್ತು. ಯುವ ಯಕ್ಷ ಕಲಾವಿದ ದಿವಿತ್ ಕೋಟ್ಯಾನ್ ಪೆರಾಡಿ ಅವರ ” ಸುರ್ಪನಖಾ ” ಏಕವ್ಯಕ್ತಿ ಯಕ್ಷ ನಾಟ್ಯ, ಮೈಸೂರು ಮಹಾರಾಜರ ಚಿತ್ರ ಬಿಡಿಸಿ ಗಮನಸೆಳೆದ ಅಥರ್ವ ಹೆಗ್ಡೆ ಮತ್ತು ಅಮೋಘ ಹೆಗ್ಡೆ ಅವರ ಚಿತ್ರ ರಚನೆ ಮತ್ತು ದಿವಾಕರ ಸಾಣೆಕಲ್ಲು ಅವರ ಬೃಹತ್ ನವಿಲಿನ ನೃತ್ಯ ಗಮನಸೆಳೆಯಿತು. ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಪೇರಿ ಅಂಗನವಾಡಿ ಶಾಲೆಯ ಮಕ್ಕಳು ವೈವಿಧ್ಯಮಯ ಕಾರ್ಯಕ್ರಮ ನೀಡಿದರು. ಹೆಬ್ರಿಯ ಚಾಣಕ್ಯ ಸಂಗೀತ ಶಾಲೆಯ ಉದಯ, ಅನನ್ಯ ಆಚಾರ್ಯ, ರಜತ್ ಆರ್ ಭಟ್ ಸಂಗೀತ ರಸ ಮಂಜರಿ ನಡೆಸಿದರು. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಬಾಲಪ್ರತಿಭೆಗಳಾದ ಪಂಚಮಿ ಮಾರೂರು, ವೃಂದಾ ಕೊನ್ನಾರ್, ಶ್ವೇತಾ, ಅನನ್ಯಾ ಜೈನ್, ರಂಜನ್ ಮೂಡುಬಿದಿರೆ, ಪ್ರಥಮ್ ಮಾರೂರು,ಪ್ರಕೃತಿ ಮಾರೂರು, ಅಮೃತಾ ಮಾರೂರು ಮಾನ್ವಿ ಜೈನ್ ಬೆದ್ರ, ವೃದ್ಧಿ ಕೇಳ ಮೂಡುಬಿದಿರೆ,, ಆದಿಕೃಷ್ಣ ಹೊಳ್ಳ ಮಗಳೂರು, ಪಂಚಮಿ.ಬಿ ವಾಮಂಜೂರು, ಪ್ರಣಮಿ ಬಿ ವಾಮಂಜೂರು, ಸಾನ್ವಿ- ಸಾಕ್ಷಿ ಗುರುಪುರ, ತೀರ್ಥ ಪೊಳಲಿ, ಅಭಿನವಿ ಹೊಳ್ಳ ಮಂಗಳೂರು, ಧನಿಷಾ ಮಂಗಳೂರು, ಸಿಂಚನಾ ಬೆಳುವಾಯಿ, ವೈವಿಧ್ಯಮಯ ಕಾರ್ಯಕ್ರಮ ನೀಡಿದರು. ಹೈಸ್ಕೂಲು ಮತ್ತು ಸ್ಥಳೀಯ ಪಾತ್ರಮಿಕ ಶಾಲೆಯ ಮಕ್ಕಳ ನೃತ್ಯವಿತ್ತು. ಗುತ್ಯಮ್ಮ ಮೇಳದ ಕವಿರತ್ನ ಕಾಳಿದಾಸ, ರಾಜಾ ರುದ್ರ ಕೋಪ ಯಕ್ಷಗಾನ ಪ್ರದರ್ಶನ ನಡೆಯಿತು.

 

Leave a Reply

Your email address will not be published. Required fields are marked *

fifteen − 13 =