ಹಾಡು ಕೇಳುತ್ತಿದ್ದಾಗ್ಲೇ ಮೊಬೈಲ್ ಸ್ಫೋಟ; ಸಾವು

Call us

ಉತ್ತರಪ್ರದೇಶ: ಮೊಬೈಲ್‌ ಫೋನ್‌ ಹೊಟ್ಟೆಯ ಮೇಲಿರಿಸಿಕೊಂಡು ಆರಾಮದಲ್ಲಿ ಅದರಿಂದ ಹಾಡುಗಳನ್ನು ಕೇಳುತ್ತಿದ್ದ ನಾನ್‌ಪಾರಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದ ಬಹರೇಚ್‌ನ ನಿವಾಸಿಯಾಗಿರುವ ಮೂಬಿನ್‌ ಎಂದಿನಂತೆ ತನ್ನ ಹೊಟ್ಟೆಯ ಮೇಲೆ ಮೊಬೈಲ್‌ ಫೋನ್‌ ಇರಿಸಿಕೊಂಡು ಆರಾಮದಿಂದ ಹಾಡು ಕೇಳುತ್ತಿದ್ದ. ಇದ್ದಕ್ಕಿದ್ದಂತೆಯೇ ಆತನ ಮೊಬೈಲ್‌ ಸ್ಫೋಟಗೊಂಡಿತು. ಕ್ಷಣ ಮಾತ್ರದಲ್ಲಿ ನಡೆದು ಹೋದ ಈ ಸ್ಫೋಟದಿಂದ ಕಂಗಾಲಾದ ಮೂಬಿನ್‌ಗೆ ತನಗೆ ಏನಾಗುತ್ತಿದೆ ಎಂದು ಅರಿಯುವುದಕ್ಕೇ ಸಾಧ್ಯವಾಗಲಿಲ್ಲ. ಅಷ್ಟರೊಳಗಾಗಿ ಆತನ ಹೊಟ್ಟೆಯಲ್ಲಿ ಗಂಭೀರ ಸ್ವರೂಪದ ಸುಟ್ಟಗಾಯಗಳಾಗಿದ್ದವು.

Call us

Call us

ಒಡನೆಯೇ ಮೂಬಿನ್‌ ನನ್ನು ನಾನ್‌ಪಾರಾ ಸಮುದಾಯ ಕೇಂದ್ರದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಲ್ಲಿ ಆತನ ಗಂಭೀರ ಪರಿಸ್ಥಿತಿಯನ್ನು ಗಮನಿಸಿ ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಲ್ಲಿಗೆ ತಲುಪುತ್ತಲೇ ಆತ ಕೊನೆಯುಸಿರೆಳೆದ.

Leave a Reply

Your email address will not be published. Required fields are marked *

10 + 1 =