ಹಾವುಗಳು ನಿರುಪದ್ರವಿಗಳು ಮತ್ತು ಸ್ನೇಹ ಜೀವಿಗಳು

Call us

Call us

ಕೋಟ: ನಮ್ಮೊಂದಿಗೆ ಬದುಕಲು ಭೂಮಿಗೆ ಬಂದ ಜೀವಿ ಹಾವುಗಳು. ಅವಗಳನ್ನು ಕಂಡಾಕ್ಷಣ ಭಯಭೀತರಾಗಿ ಆತಂಕಿತರಾಗಿ ಮಾಡುವ ಎಡವಟ್ಟುಗಳಿಂದ ಅನಾಹುತ ಸಂಭವಿಸುತ್ತದೆ ಹೊರತು, ತನ್ನಷ್ಟಕ್ಕೆ ಬಂದು ಕಚ್ಚುವ ಅಭ್ಯಾಸ ಅವುಗಳಿಗೆ ಇಲ್ಲ. ಹಾವುಗಳು ನಿರುಪದ್ರವಿ ಮತ್ತು ಸ್ನೇಹ ಜೀವಿಗಳು ಎಂದು ಶ್ರೀ ಕ್ಷೇತ್ರ ಅಂಬಲಪಾಡಿಯ ಧರ್ಮದರ್ಶಿ ಡಾ.ನಿ.ವಿಜಯ ಬಲ್ಲಾಳ್ ಹೇಳಿದರು.

Call us

Call us

Call us

ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ ೮ನೇ ದಿನದ ಅಂಗವಾಗಿ ದಿ.ಸಿ.ಮನೋಹರ ತೋಳಾರ್ ದತ್ತಿನಿಧಿ ಪ್ರಾಯೋಜಕತ್ವದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಡ, ಅಜೇಯ ಕ್ರಿಕೆಟರ‍್ಸ್ ಕುಂಜಿಗುಡಿ, ಸೆಲ್ಕೋ ಸೋಲಾರ್ ಪ್ರೈ ಲಿಮಿಟೆಡ್, ಸಿಂಡಿಕೇಟ್ ಬ್ಯಾಂಕ್ ಸಾಲಿಗ್ರಾಮ ಶಾಖೆ, ಚೇಂಪಿ ನಾರಾಯಣ ಶ್ಯಾನುಭಾಗ ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಉರಗ ತಜ್ಞ ಗುರುರಾಜ ಸನಿಲ್ ಪ್ರಸ್ತುತ ಪಡಿಸಿದ ಉರಗ ಪ್ರದರ್ಶನ ಪ್ರಾತ್ಯಕ್ಷಿಕೆ ಹಾವು ನಾವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೊದಲು ನಮ್ಮಲ್ಲಿನ ಭಯ ನಿವಾರಣೆಯಾಗಬೇಕು. ಕೇವಲ ಉರಗಗಳ ವಿಚಾರಕ್ಕೆ ಹೊರತುಪಡಿಸಿ ಕೂಡ ನಮ್ಮಲ್ಲಿ ಭಯ ದೂರವಾದರೆ ಸಾಧನೆಗೆ ಅವಕಾಶವಾಗುತ್ತದೆ ಎಂದರು.

Call us

Call us

ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಪ್ರಮೋದ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಕಾಶ್ ತೋಳಾರ್, ಉರಗ ತಜ್ಞ ಗುರುರಾಜ ಸನಿಲ್, ಕಾರ್ಕಡ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪದ್ಮಜಾ, ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಶ್ರೀಯಾನ್, ಶಿಕ್ಷಣ ಇಲಾಖೆಯ ರೋಬಿ ಪಿಂಟೋ, ಗಿಳಿಯಾರು ಶಾಂಭವಿ ಶಾಲೆಯ ಮುಖ್ಯ ಶಿಕ್ಷಕ ರಾಜಾರಾಮ್ ಐತಾಳ್, ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ ಹೊಳ್ಳ, ವಿವೇಕ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವೆಂಕಟೇಶ್ ಉಡುಪ, ಸೆಲ್ಕೋ ಸೋಲಾರ್‌ನ ಗುರು ಪ್ರಕಾಶ್ ಶೆಟ್ಟಿ, ಅಜೇಯ ಕ್ರಿಕೆಟರ‍್ಸ್ ಕುಂಜಿಗುಡಿಯ ಪ್ರಶಾಂತ ಮೊಗವೀರ ಮತ್ತು ವಿವಿಧ ಶಾಲೆಯ ಮುಖ್ಯ ಶಿಕ್ಷಕರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇದೇ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಗಣ್ಯರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಷ್ಠಾನದ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಪ್ರಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಟತಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಉರಗ ತಜ್ಞ ಗುರುರಾಜ ಸನಿಲ್ ಅವರು ಹಾವುಗಳಲ್ಲಿನ ವಿವಿಧ ಪ್ರಭೇದ, ಗುಣಲಕ್ಷಣಗಳು, ಮುಂಜಾಗರೂಕ ಕ್ರಮ, ಹಾವು ಕಚ್ಚಿದ ಬಳಿಕದ ಪ್ರಥಮ ಚಿಕಿತ್ಸೆ, ಸಾರ್ವಜನಿಕರಲ್ಲಿ ಮೂಢನಂಬಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಕೊನೆಯ ವಿಷವಿಲ್ಲದ ಮೂರು ಬಗೆಯ ಹಾವುಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೆ ನೀಡಿ ಹಾವಿನ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿದರು. ತಮ್ಮೋಂದಿಗೆ ತಂದಿದ್ದ ನಾಗರಹಾವನ್ನು ಸಭೆಯಲ್ಲಿ ತೆಗೆದಿರಿಸಿ ಅದರ ವರ್ತನೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮಗೆ ಹಾವಿನ ಬಗ್ಗೆ ಇದ್ದ ಭಯ ಮತ್ತು ಗೊಂದಲಗಳನ್ನು ನಿವಾರಿಸಿಕೊಂಡರು.

Sneke Sunil3 Sneke Sunil4

Leave a Reply

Your email address will not be published. Required fields are marked *

two × three =