ಗಂಗೊಳ್ಳಿಯ ಯುವಕರಿಂದ ರಸ್ತೆ ಹಂಪ್ಸ್ ಗೆ ಬಣ್ಣ

Call us

Call us

ಗಂಗೊಳ್ಳಿ: ಗಂಗೊಳ್ಳಿಯ ಜನರ ಹಾಗೂ ವಾಹನ ಸವಾರರ ಸುರಕ್ಷತೆಗಾಗಿ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ನಿರ್ಮಿಸಲಾಗಿರುವ ವೇಗ ನಿಯಂತ್ರಣಗಳಿಗೆ (ರಸ್ತೆ ಉಬ್ಬುಗಳು) ಸರಿಯಾದ ಬಣ್ಣವಿಲ್ಲದಿರುವುದರಿಂದ ಜನರು ಹಾಗೂ ವಾಹನ ಸವಾರರು ಬಹಳಷ್ಟು ಸಮಸ್ಯೆಗಳನ್ನು ಹಾಗೂ ತೊಂದರೆಯನ್ನು ಅನುಭವಿಸುತ್ತಿದ್ದರು.

Click Here

Call us

Call us

ಜನರ ಹಾಗೂ ವಾಹನ ಸವಾರರ ಸಮಸ್ಯೆಗಳಿಗೆ ಸ್ಪಂದಿಸಿದ ಗಂಗೊಳ್ಳಿಯ ವೀರ ಸಾವರ್ಕರ್ ದೇಶ ಪ್ರೇಮಿಗಳ ಬಳಗದ ಯುವಕರ ತಂಡ ಸೋಮವಾರ ರಾತ್ರಿಯಿಂದ ಬೆಳಗಿನ ವರೆಗೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿರುವ ಎಲ್ಲಾ ವೇಗ ನಿಯಂತ್ರಣಗಳಿಗೆ (ಹಮ್ಸ್) ಉತ್ತಮವಾದ ರಬ್ಬರ್ ಗುಣಮಟ್ಟದ ಪೈಂಟಿಂಗ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವು ಬಾರಿ ಈ ರಸ್ತೆ ಉಬ್ಬುಗಳಿಗೆ ಪೈಂಟಿಂಗ್ ಮಾಡಲಾಗಿದ್ದರೂ ಕೆಲವೇ ದಿನಗಳಲ್ಲಿ ಇದು ಅಳಿಸಿ ಹೋಗುತ್ತಿತ್ತು. ರಸ್ತೆಗಳಲ್ಲಿ ಉಬ್ಬುಗಳಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡ ಯಾವುದೇ ಸೂಚನಾ ಫಲಕ ಅಳವಡಿಸಿರುವುದರಿಂದ ವಾಹನ ಸವಾರರಿಗೆ ರಸ್ತೆ ಉಬ್ಬುಗಳನ್ನು ಅಂದಾಜಿಸುವಲ್ಲಿ ವಿಫಲರಾಗಿ ಅವಘಡಗಳು ಸಂಭವಿಸುತ್ತಿದ್ದವು.

Click here

Click Here

Call us

Visit Now

ಈ ಕಾರ್ಯಕ್ಕೆ ಉತ್ತಮ ಗುಣಮಟ್ಟದ ಪೈಂಟನ್ನು ನೀಡಿ ಸಹಕರಿಸಿದ ಎಂ.ಮಾಧವ ಸುಬ್ರಾಯ ಪೈ ಅಂಗಡಿಯ ಮಾಲೀಕ ಎಂ.ನಾಗೇಂದ್ರ ಪೈ ಅವರನ್ನು ಯುವಕರ ತಂಡ ಅಭಿನಂದಿಸಿದೆ. ರಸ್ತೆ ಉಬ್ಬುಗಳಿಗೆ ಬಣ್ಣ ಬಳಿದಿರುವ ವೀರ ಸಾವರ್ಕರ್ ದೇಶ ಪ್ರೇಮಿಗಳ ಬಳಗದ ಯುವಕರಿಗೆ ಸ್ಥಳೀಯ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

seventeen + 6 =