ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೇಡ್ ಪೋನ್ ಧರಿಸಿ ಹಳಿಯ ಮೇಲೆ ತೆರಳುತ್ತಿದ್ದ ಯುವಕನಿಗೆ ರೈಲು ಢಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕುಂದಬಾರಂದಾಡಿಯಲ್ಲಿ ಬಳಿ ವರದಿಯಾಗಿದೆ. ಕುಂದಬಾರಂದಾಡಿ ಮೂಲದ ಯುವಕ ಜಗತ್ ಹೆಗ್ಡೆ (23) ಮೃತ ದುರ್ದೈವಿ.
ಮೂಲತಃ ಕುಂದಬಾರಂದಾಡಿಯವರಾದ ಜಗತ್ ಹೆಗ್ಡೆ ಕುಟುಂಬ ಪ್ರಸ್ತುತ ಬೆಂಗಳೂರಿನಲ್ಲಿದೆ. ತನ್ನ ಅಜ್ಜಿಯನ್ನು ಊರಿಗೆ ಬಿಡುವ ಸಲುವಾಗಿ ಕುಂದಬಾರಂದಾಡಿಯ ಮನೆಗೆ ಬಂದಿದ್ದ ಜಗತ್ ಹೆಗ್ಡೆ ಪ್ರತಿಭಾರಿಯಂತೆ ಸಂಜೆಯ ವೇಳೆ ಸಮಯ ಕಳೆಯುವುದಕ್ಕಾಗಿ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಡೆಮೋ ರೈಲು ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇಂಜಿನಿಯರಿಂಗ್ ವಿಧ್ಯಾರ್ಥಿಯಾಗಿದ್ದ ಜಗತ್ ಹೆಗ್ಡೆ ರಾತ್ರಿ ಮರಳಿ ಬೆಂಗಳೂರಿಗೆ ತೆರಳುವವರಿದ್ದರು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಂಗೊಳ್ಳಿ ಠಾಣಾಧಿಕಾರಿ ಹಾಗೂ ಸಿಬ್ಬಂಧಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.