ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಗಂಗೊಳ್ಳಿ ಮತ್ತು ಹರೆಗೋಡು ಮಹಾವಿಷ್ಣು ಯುವಕ ಮಂಡಲ, ಮಾನಸ ಯುವತಿ ಮಂಡಲ ಇವರ ಜಂಟಿ ಆಶ್ರಯದಲ್ಲಿ ಹೆಮ್ಮಾಡಿಯ ನಾಟಿ ವೈದ್ಯ ಗೋಪಾಲ ಗಾಣಿಗ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಂಗೊಳ್ಳಿ ಗಂಗೊಳ್ಳಿ ರೋಟರಿ ಅಧ್ಯಕ್ಷ ರಾಜೇಶ್ ಎಂ.ಜಿ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಸದಸ್ಯ ಪ್ರದೀಪ ಡಿ.ಕೆ., ಚಂದ್ರ ನಾಯ್ಕ್, ನರಸಿಂಹ ಗಾಣಿಗ, ಯುವಕ ಮಂಡಲದ ಅಧ್ಯಕ್ಷ ಶ್ರೀಕಾಂತ ಆಚಾರ್ಯ, ಗಂಗಮ್ಮ, ನಾಗರಾಜ ಗಾಣಿಗ, ರಾಜು ಗಾಣಿಗ, ಪ್ರದೀಪ ದೇವಾಡಿಗ, ರವಿ ಉಪ್ಪುಂದ, ರಾಮಚಂದ್ರ ಕುಲಾಲ್ ಮತ್ತು ದೀಪಕ ಕುಮಾರ್ ಉಪಸ್ಥಿತರಿದ್ದರು.
ಪ್ರಸಾದ ಆಚಾರ್ಯ ಸ್ವಾಗತಿಸಿದರು. ರವೀಶ ಡಿ.ಎಚ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಗುರುರಾಜ ಗಾಣಿಗ ವಂದಿಸಿದರು.