ಕುಂದಾಪುರ: ವಿದ್ಯಾರ್ಥಿಗಳು ಋಣಾತ್ಮಕ ಮತ್ತು ಸ್ಥಿರ ಮನೋಭಾವನೆಯಿಂದ ಹೊರಬಂದು ಆತ್ಮವಿಶ್ವಾಸದಿಂದ ಮುನ್ನೆಡೆದಾಗ ಉನ್ನತ ಮಟ್ಟದದಲ್ಲಿ ಸಾಧಿಸಬಹುದು ಎಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲ ಪ್ರೋ. ಕೆ.ರಾಧಾಕೃಷ್ಣ ಹೇಳಿದರು.
ಅವರು ಹೆಮ್ಮಾಡಿ ಶ್ರೀ ವಿ.ವಿ.ವಿ.ಮಂಡಳಿ ಅಧೀನಕ್ಕೆ ಒಳಪಟ್ಟ ಹೆಮ್ಮಾಡಿ ಜನತಾ ಪ್ರೌಢ ಶಾಲೆ ಮತ್ತು ಜನತಾ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿಯೋಜಿನ ಭಾಷಣ ಮಾಡುತ್ತಾ ಮಾತನಾಡಿದರು. ನಾವು ಮಾತ್ರ ಬದಲಾವಣೆಯಾದರೆ ಸಾಲದು. ಎಲ್ಲಾ ಕಡೆಯಿಂದ ಬರುವ ಜ್ಷಾನವನ್ನು ಸ್ವೀಕರಿಸಿ, ಶಿಕ್ಷಣದ ಸಂಕೀರ್ಣತೆಯಿಂದ ಹೊರಬಂದು ಸದಾ ಮುನ್ನುಗ್ಗುವ ಪ್ರವೃತ್ತಿ ಇದ್ದರೆ ಗುರಿ ತಲುಪಬಹುದು ಎಂದರು.
ಆಡಳಿತ ಮಂಡಳಿಯ ಸಂಘಟನಾ ಕಾರ್ಯದರ್ಶಿ ಶಂಕರ.ಎ.ಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ದೇವಾಡಿಗ ಅವರು ದ್ವಜಾರೋಹಣ ನೆರವೇರಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಶುಭಾಂಶಸನೆಗೈದರು. ಮರವಂತೆ ಸರಕಾರಿ ಪ್ರೌಢ ಶಾಲಾ ಶಿಕ್ಷಕ ಚಂದ್ರ.ಡಿ ಸ್ವಸ್ತಿ ವಾಚನಗೈದರು.
ಬೈಂದೂರು ರತ್ತು ಬಾ ಜನತಾ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಿ.ಎಸ್ ಭಟ್ ಆಡಳಿತ ಮಂಡಳಿಯ ಸದಸ್ಯ ಶೀನ ಪೂಜಾರಿ, ಕಾಲೇಜು ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ರಿತೇಶ್ ಬಂಗೇರ, ಪ್ರೌಢ ಶಾಲಾ ವಿದ್ಯಾರ್ಥಿ ನಾಯಕ ಪ್ರಮೋದ್ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಮೋಹನ ದಾಸ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ವಾರ್ಷಿಕ ವರದಿ ಮಂಡಿಸಿದರು. ನಿವೃತ್ತಿಗೊಂಡ ಕಚೇರಿ ಸಿಬ್ಬಂದಿ ಸತೀಶ್ ಪೈ ಮತ್ತು ಪತ್ನಿ, ರಾಜ್ಯಮಟ್ಟದ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಕು.ರಮ್ಯಾ ಅವರನ್ನು ಸನ್ಮಾನಿಸಲಾಯಿತು. ಶೇ.100 ಪಲಿತಾಂಶಕ್ಕೆ ಕಾರಣಿಕತೃ ಶಿಕ್ಷಕ ವೃಂದದವರನ್ನು ಅಭಿನಂದನೆ ನೀಡಿ ಗೌರವಿಸಲಾಯಿತು. ನಾರಾಯಣ ಸ್ವಾಮಿ, ದೇವೇಂದ್ರ ನಾಯ್ಕ್ ಸನ್ಮಾನಿತರನ್ನು ಪರಿಚಯಿಸಿದರು. ಪ್ರೌಢ ಶಾಲಾ ವಿಭಾಗದ ಅಶೋಕ್ ಶೆಟ್ಟಿ, ವಿಠಲ ನಾಯ್ಕ್, ದೇವೇಂದ್ರ ನಾಯ್ಕ್ ಕಾಲೇಜು ವಿಭಾಗದ ಗೀತಾ ಜೋಷಿ, ಹರೀಶ್ ಕಾಂಚನ್, ಗಿರಿಜಾ ಕೊಡೇರಿ, ಶ್ರೀಲತಾ.ಕೆ ಅವರು ವಿಜೇತರ ಪಟ್ಟಿ ವಾಚಿಸಿದರು. ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಸಾಧು.ಎಸ್ ಬಿಲ್ಲವ ಸ್ವಾಗತಿಸಿದರು. ಜಗದೀಶ್ ಶೆಟ್ಟಿ ಮಂಜುನಾಥ ಚಂದನ ಕಾರ್ಯಕ್ರಮ ನಿರೂಪಿಸಿದರು. ಜೆಸ್ಸಿ ಡಿಸಿಲ್ವ, ಮಂಜುನಾಥ.ಕೆ.ಎಸ್, ಪ್ರವಿತಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ದಿನಕರ.ಎಸ್ ವಂದಿಸಿದರು.