ಹೆಮ್ಮಾಡಿ: ಲಾರಿ-ಬೊಲೆರೋ ಡಿಕ್ಕಿ. ಬೊಲೆರೋ ಚಾಲಕ ದುರ್ಮರಣ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ

Click Here

Call us

Call us

ಕುಂದಾಪುರ: ಇನ್ಸುಲೇಟರ್ ಹಾಗೂ ಬೊಲೊರೋ ಪಿಕಪ್ ವಾಹನದ ನಡುವಿನ ಭೀಕರ ಅಪಘಾತದಲ್ಲಿ ಪಿಕಪ್ ವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ  ಹೆಮ್ಮಾಡಿಯಲ್ಲಿ ವರದಿಯಾಗಿದೆ. ಮೃತ ಚಾಲಕನನ್ನು ಮುಂಬೈ ನಿವಾಸಿ ದತ್ತಾಸಿಂಗ್ (48) ಎಂದು ಗುರುತಿಸಲಾಗಿದೆ.

Click here

Click Here

Call us

Visit Now

ಹೆಮ್ಮಾಡಿಯ ಜಾಲಾಡಿ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಂದೂರು ಕಡೆಯಿಂದ ಶೋರೂಮಿಗೆ ತೆರಳುತ್ತಿದ್ದ ಹೊಸ ಬೊಲೊರೋ ಪಿಕಪ್ ವಾಹನವು ಓವರಟೇಕ್ ಮಾಡುವ ಭರದಲ್ಲಿ ಕುಂದಾಪುರ ಕಡೆಯಿಂದ ನಾವುಂದಕ್ಕೆ ತೆರಳುತ್ತಿದ್ದ ಇನ್ಸುಲೇಟರ್ ವಾಹನ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಪಿಕಪ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕನ ತಲೆಯ ಭಾಗ ಮುರಿದು ಅಲ್ಲಿಯೇ ಮೃತಪಟ್ಟಿದ್ದಾನೆ. ಇನ್ಸುಲೇಟರ್ ಗೆ ಡಿಕ್ಕಿ ಹೊಡೆದ ಪಿಕಪ್ ಇನ್ನೊಂದು ಲಾರಿಗೂ ಡಿಕ್ಕಿ ಹೊಡೆದಿರುವುದಲ್ಲದೇ ಇನ್ಸುಲೇಟರ್ ನ ಕೆಳಭಾಗದಲ್ಲಿ ಸಿಲುಕಿಕೊಂಡಿತ್ತು. ಚಾಲಕನ್ನು ದೇಹವನ್ನು ಅದರಿಂದ ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಘಟನೆಯಲ್ಲಿ ಇನ್ಸುಲೇಟರ್ ಮುಂಭಾಗ ಸಂಪೂರ್ಣ ಹಾನಿಗೊಳಗಾಗಿದ್ದು ಅದರ ಚಾಲಕನಿಗೂ ಗಾಯಗಳಾಗಿವೆ.  (ಕುಂದಾಪ್ರ ಡಾಟ್ ಕಾಂ)

ಘಟನೆಯಿಂದಾಗಿ ಸುಮಾರು ಒಂದೂವರೇ ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಎಡೆಮಾಡಿಕೊಟ್ಟರು. ಹೆಮ್ಮಾಡಿಯ ಯುವಕರು ಪೊಲೀಸರಿಗೆ ಸಾಥ್ ನೀಡಿದ್ದರಿಂದ ವಾಹನವನ್ನು ಶೀಘ್ರವೇ ರಸ್ತೆಯಿಂದ ತೆರವುಗೊಳಿಸಲು ಸಾಧ್ಯವಾಯಿತು.  ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಪಿಎಸ್‌ಐ ನಾಸಿರ್ ಹುಸೇನ್, ಟ್ರಾಫಿಕ್ ಎಸ್‍ಐ ದೇವೆಂದ್ರ ಸ್ಥಳಕ್ಕಾಗಮಿಸಿ ಪರಿಶೀಲಿದ್ದಾರೆ. (ಕುಂದಾಪ್ರ ಡಾಟ್ ಕಾಂ)

accident Mahendra Boleo and insulator lorry at hemmady (1) accident Mahendra Boleo and insulator lorry at hemmady (2) accident Mahendra Boleo and insulator lorry at hemmady (3) accident Mahendra Boleo and insulator lorry at hemmady (4) accident Mahendra Boleo and insulator lorry at hemmady (5) accident Mahendra Boleo and insulator lorry at hemmady (6)

Call us

Leave a Reply

Your email address will not be published. Required fields are marked *

12 + 15 =