ಹೆರಿಗೆಯ ಬಳಿಕ ಬಾಣಂತಿಯರಿಗೆ ಶಕ್ತಿ ನೀಡುವ ‘ಆಹಾರ ಪಥ್ಯ’

Call us

Call us

ಮಹಿಳೆಯೋರ್ವಳಿಗೆ ಗರ್ಭಾವಸ್ಥೆಯಲ್ಲಿ ಆರೈಕೆ ಮಾಡಿದಂತೆಯೇ ಮಗುವಿನ ಹೆರಿಯಾದ ಬಳಿಕವೂ ನಿಯಮಿತವಾಗಿ ಆರೈಕೆ ಮಾಡುವುದು ಅತಿಮುಖ್ಯ. ಬಾಣಂತಿ ಮೈ ಹಸಿ ಮೈ ಎಂಬುದಾಗಿ ಕೂಡ ಹೇಳುವುದರಿಂದ ಈ ಸಮಯದಲ್ಲಿ ಆಕೆ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಹೆಚ್ಚುವರಿ ಪ್ರೋಟೀನ್ ವಿಟಮಿನ್ಗಳು ಆಕೆಗೆ ಬೇಕಾಗುತ್ತದೆ. ಹೆರಿಗೆಯ ಬಳಿಕ ಯಾವ ಪಾನೀಯ, ಪೇಯಗಳ ಸೇವನೆಯಿಂದ ಬಾಣಂತಿಯ ಆರೋಗ್ಯ ಸುಧಾರಿಸಲಿದೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ.

Call us

Click here

Click Here

Call us

Call us

Visit Now

Call us

ಓಟ್ಸ್:
ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟಲು ಓಟ್ಸ್ ಸಹಾಯ ಮಾಡಲಿದೆ. ಇದು ಕಾರ್ಬೋಹೈಡ್ರೇಟ್‌ಗಳ ಹೆಚ್ಚುವರಿ ಅಂಶವನ್ನು ಒಳಗೊಂಡಿದ್ದು, ಫೈಬರ್, ಐರನ್ ಮತ್ತು ಪ್ರೋಟೀನ್ಗಳನ್ನು ಒಳಗೊಂಡಿದೆ. ಪೋರಿಡ್ಜ್, ಕಿಚಡಿ ಅಥವಾ ಉಪ್ಮಾದಂತೆ ಮಾಡಿಕೊಂಡು ಓಟ್ಸ್ ಅನ್ನು ಸೇವಿಸಬಹುದಾಗಿದೆ. ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ನೀವು ಓಟ್ಸ್ನೊಂದಿಗೆ ಸೇರಿಸಿಕೊಳ್ಳಬಹುದು.

ಅರಿಶಿನ:
ಅರಶಿನವನ್ನು ಅನಾದಿ ಕಾಲದಿಂದಲೂ ಔಷಧವಾಗಿ ಬಳಸಲಾಗುತ್ತಿದೆ. ಇದು ಗಾಯವನ್ನು ಒಣಗಿಸಲು ನೆರವಾಗುತ್ತದೆ ಮತ್ತು ಉರಿಯೂತ ಅಲರ್ಜಿಯನ್ನು ನಿವಾರಣೆ ಮಾಡಲಿದೆ. ಬಿಸಿ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ನಿಮಗೆ ಹೆಚ್ಚು ಪ್ರಯೋಜನ ಉಂಟಾಗಲಿದೆ. ಬೇಕಿದ್ದರೆ ಸಕ್ಕರೆ ಇಲ್ಲವೇ ಜೇನನ್ನು ನಿಮಗೆ ಸೇರಿಸಿಕೊಳ್ಳಬಹುದು.

ಒಣ ಶುಂಠಿ:
ಶುಂಠಿಯನ್ನು ಒಣಗಿಸಿ ಮಾಡಿಟ್ಟುಕೊಂಡು ಹುಡಿ ಅಥವಾ ಒಣ ಶುಂಠಿಯನ್ನು ಗರ್ಭಾವಸ್ಥೆಯಲ್ಲಿ ನಿಮಗೆ ಬಳಸಿಕೊಳ್ಳಬಹುದಾಗಿದೆ. ಇದು ಉರಿಯೂತ ನಿವಾರಣೆಯಂತಹ ಅಂಶವನ್ನು ಹೊಂದಿದೆ. ಇದು ಬಾಣಂತನದ ಸಮಯದಲ್ಲಿ ನಿಮಗೆ ಶಕ್ತಿಯನ್ನು ಒದಗಿಸುವಲ್ಲಿ ನೆರವಾಗಲಿದೆ. ಇದರಿಂದ ಲಾಡು ತಯಾರಿಸಿ ಬಾಣಂತಿಯರಿಗೆ ನೀಡಲಾಗುತ್ತದೆ. ನಿಮ್ಮ ಊಟದಲ್ಲಿ ಸ್ವಲ್ಪ ಶುಂಠಿ ಹುಡಿಯನ್ನು ಬೆರೆಸಿ ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

ಬೇಳೆಕಾಳುಗಳು:
ಇವುಗಳಲ್ಲಿ ಹೆಚ್ಚುವರಿ ಪ್ರೋಟೀನ್ ಅಂಶಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇವುಗಳನ್ನು ಬೇಯಿಸಿ ಹಾಗೆಯೆ ಅಥವಾ ಸಾಂಬಾರು, ಸಾರಿನ ರೂಪದಲ್ಲಿ ಕೂಡ ಸೇವಿಸಬಹುದಾಗಿದೆ. ಮಸೂರ್ ದಾಲ್ ಅಥವಾ ಮೂಂಗ್ ದಾಲ್ ಬಾಣಂತಿಯರಿಗೆ ಅತ್ಯುತ್ತಮ ಆಹಾರ ಎಂದೆನಿಸಿದೆ.

Call us

ಕ್ಯಾರಮ್ ಬೀಜಗಳು:
ಹೆರಿಗೆಯ ನಂತರ ಈ ಬೀಜಗಳನ್ನು ಪ್ರತಿಯೊಬ್ಬ ತಾಯಿಯೂ ಸೇವಿಸಬೇಕು. ಇದು ಮಲಬದ್ಧತೆಯಂತಹ ಸಮಸ್ಯೆಯನ್ನು ದೂರಮಾಡುತ್ತದೆ. ಅಂತೆಯೇ ಅಜೀರ್ಣ, ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತಾಯಿಯಲ್ಲಿ ಎದೆಹಾಲನ್ನು ವೃದ್ಧಿಸುತ್ತದೆ. ಇದು ಗರ್ಭಾಶಯದ ಕುಗ್ಗುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಅದು ಮೂಲ ರೂಪಕ್ಕೆ ಹಿಂತಿರುಗಲು ಸಹಾಯ ಮಾಡುತ್ತದೆ. ಅತ್ಯಂತ ಪರಿಣಾಮಕಾರಿ ಜೀವಿವಿರೋಧಿ ಮತ್ತು ಶಿಲೀಂಧ್ರಗಳ ಘಟಕಾಂಶವಾಗಿದೆ. ಇದು ಉತ್ಕರ್ಷಣ ನಿರೋಧಿ ಲಕ್ಷಣಗಳನ್ನು ಹೊಂದಿದೆ. ನೀವು ಸೇವಿಸುವ ಯಾವುದೇ ಆಹಾರದಲ್ಲಿ ಕೂಡ ಈ ಬೀಜಗಳನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ತಾಯಂದಿರು ಇದನ್ನು ಬಿಸಿನೀರಿನೊಂದಿಗೆ ಬೆರೆಸಿ ಸೇವಿಸುತ್ತಾರೆ.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

five × two =