ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಸಂಸ್ಥೆಯಿಂದ ಬಾಲಕನ ಚಿಕಿತ್ಸೆಗೆ ನೆರವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲಸೀಮಿಯಾ ಮೇಜರ್ ಕಾಯಿಲೆಯಿಂದ ಬಳಲುತ್ತಿರುವ ಬೈಂದೂರಿನ ಸುಶಾಂತ್ (4)ನ ಚಿಕಿತ್ಸೆಗಾಗಿ ಸಹೃದಯಿದಾನಿಗಳ ನೆರವಿನಿಂದ ಒಟ್ಟುಗೂಡಿಸಿದ ಒಟ್ಟು 42351 ರೂಪಾಯಿ (40351 ಚೆಕ್ ಮತ್ತು 2000 ನಗದು) ಹಣವನ್ನು ಕುಂದಾಪುರ ಪೋಲಿಸ್ ಠಾಣೆಯ ಠಾಣಾಧಿಕಾರಿಗಳಾದ ಸದಾಶಿವ್ ಗವರೋಜಿ ಅವರ ನೇತ್ರತ್ವದಲ್ಲಿ ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಬಾಲನಕ ತಂದೆಗೆ ಹಸ್ತಾಂತರಿಸಲಾಯಿತು.

Call us

Call us

ಹೆಲ್ಪಿಂಗ್ ಹ್ಯಾಂಡ್ಸ್ ಸಮಾಜಸೇವೆಯನ್ನು ಮೆಚ್ಚಿದ ಠಾಣಾಧಿಕಾರಿಗಳಾದ ಸದಾಶಿವ್ ಗೌರವಜಿ ಅವರು ಮುಂದಿನ ದಿನದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಆಗುವ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಬಾಲಕನ ಚಿಕಿತ್ಸೆ ಫಲಕಾರಿಯಾಗಲೆಂದು ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಬಾಲಕನ ಹೆಸರಿನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

Call us

Call us

ಈ ಸಂದರ್ಭ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ್ ಮೊಗವೀರ, ಗೌರವ ಸಲಹೆಗಾರರಾದ ರವೀಂದ್ರ ರಟ್ಟಾಡಿ, ಕಾರ್ಯದರ್ಶಿಗಳಾದ ಗುರುಪ್ರಸಾದ್ ಖಾರ್ವಿ, ಕಾರ್ಯಾಧ್ಯಕ್ಷರಾದ ಚರಣ್ ಗಂಗೊಳ್ಳಿ ,ಜೊತೆ ಕಾರ್ಯದರ್ಶಿ ಪ್ರಶಾಂತ್ ತಲ್ಲೂರು, ಸದಸ್ಯರಾದ ಸುನೀಲ್ ತಲ್ಲೂರು ಹಾಗೂ ಸುಕೇಶ್ ನಾಯ್ಕ ಉಪಸ್ಥಿತರಿದ್ದರು.

ಕುಂದಾಪುರ ಭಾಗದಲ್ಲಿ ಸಾಕಷ್ಟು ಸಮಾಜಪರ ಕಾರ್ಯ ಹಾಗೂ ತುರ್ತು ರಕ್ತದ ಪೂರೈಕೆ, ರಕ್ತದಾನ ಶಿಬಿರಗಳನ್ನು ನಡೆಸುತ್ತಿರುವ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಸಂಸ್ಥೆ ಅಪಾರ ಜನರ ಪ್ರೀತಿಯನ್ನು ಸಂಪಾದಿಸಿದೆ. ಈ ತಂಡದೊಂದಿಗೆ ಸಮಾಜಪರ ಕಾರ್ಯದಲ್ಲಿ ಕೈ ಜೋಡಿಸುವ ಇಚ್ಚೆ ಇದ್ದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ್ ಮೊಗವೀರ ಕೋಟೆಶ್ವರ ಮೊ. 9535309691 ಅವರನ್ನು ಸಂಪರ್ಕಿಸಬಹುದು

Leave a Reply

Your email address will not be published. Required fields are marked *

nineteen + 2 =