ಹೇರಂಜಾಲು ಗುಡೇ ಮಹಾಲಿಂಗೇಶ್ವರ ದೇವರ ಮನ್ಮಹಾರಥೋತ್ಸವ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೇರಂಜಾಲು ಗ್ರಾಮದೇವತೆ ಶ್ರೀ ಗುಡೇ ಮಹಾಲಿಂಗೇಶ್ವರ ದೇವರ ವಾರ್ಷಿಕ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

ಕಟ್ಟೆ ಶಂಕರ ಭಟ್ಟರು ದೇವರ ಧಾರ್ಮಿಕ ವಿಧಿವಿಧಾನ ಪೂರೈಸಿದರು. ಮಧ್ಯಾಹ್ನ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ದೇವಳದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಎಚ್. ಜಯಶೀಲ ಶೆಟ್ಟಿ, ಖಜಾಂಚಿ ಎಚ್. ವಿಜಯ್ ಶೆಟ್ಟಿ, ಆಡಳಿತ ಮೊಕ್ತೇಸರ ಎಚ್. ಪದ್ಮನಾಭ ಮೇರ್ಟ, ಆಡಳಿತ ಸಹ ಮೊಕ್ತೇಸರ ಯು. ಎಸ್. ಗೋಪಾಲಕೃಷ್ಣ ರಾವ್, ಕಾಲ್ತೋಡು ಗ್ರಾಪಂ ಅಧ್ಯಕ್ಷ ಮಾದಯ್ಯ ಶೆಟ್ಟಿ, ಉಪಾಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ, ಜಿಪಂ, ತಾಪಂ, ಗ್ರಾಪಂ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ರಾತ್ರಿ ಹೇರಂಜಾಲು ಮತ್ತು ಕಾಲ್ತೋಡು ಗೆಳೆಯರ ಬಳಗ ಪ್ರಾಯೋಜಕತ್ವದ ಕುಂದಾಪುರ ಮೂರು ಮುತ್ತು ಕಲಾತಂಡದವರಿಂದ ರಾಮ-ಕೃಷ್ಣ-ಗೋವಿಂದ ಎಂಬ ನಾಟಕ ಪ್ರದರ್ಶನಗೊಂಡಿತು.

– ಜನನಿ ಉಪ್ಪುಂದ

Heranjalu Gude mahalingeshwara Temple rathotsava1

Leave a Reply

Your email address will not be published. Required fields are marked *

20 − three =