ಹೊಸೂರು: ‘ಶರತ್ ರಂಗ ಸಂಚಲನ -2015′ ಉದ್ಘಾಟನೆ

Call us

Call us

ಬೈಂದೂರು: ಇಂದು ಸನ್ನಿವೇಶದ ಒಂದು ಸಂಭಾಷಣೆಯೇ ಒಂದು ನಾಟಕವಾಗುತ್ತಿದೆ. ಇದು ಸಾಧ್ಯವಾದದ್ದು ನಮ್ಮೊಳಗಿನ ಹುಡುಕಾಟದಿಂದ. ಹುಡುಕಾಟದೊಂದಿಗೆ ನಾವು ವಿಕಾಸಗೊಳ್ಳುತ್ತಿದ್ದೇವೆ ಎಂಬುದು ಇದರಿಂದಲೇ ತಿಳಿಯುತ್ತದೆ. ಇಂತಹ ಸಾಂಸ್ಕೃತಿಕ ಪ್ರಕಾರಗಳು ಮನುಷ್ಯನ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ಜಾದೂಗಾರ ಓಂ ಗಣೇಶ ಉಪ್ಪುಂದ ಹೇಳಿದರು.

Call us

Call us

Visit Now

ಸಂಚಲನ ರಿ. ಹೊಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹೊಸೂರು-ತೂದಳ್ಳಿಯ ಹೊಂಗಿರಣ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ‘ಶರತ್ ರಂಗ ಸಂಚಲನ -2015′ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಚಿಕ್ಕವರಿದ್ದಾಗ ಸಂಪೂರ್ಣ ರಾಮಾಯಣದ ನಾಟಕಗಳನ್ನು ನೋಡುತ್ತಿದ್ದೇವು. ವರ್ಷಗಳು ಕಳೆದಂತೆ ರಾಮಾಯಣ ಒಂದು ದೃಶ್ಯ ನಾಟಕವಾಯಿತು. ಬಳಿಕ ದೃಶ್ಯದ ಒಂದು ಸನ್ನಿವೇಶಗಳೇ ನಾಟಕವಾಯಿತು ಎಂದು ಉದಾಹರಿಸಿದರು. ರಾಜ್ಯದಲ್ಲಿ ಸರಕಾರ ನೂರಾರು ಸಾಂಸ್ಕೃತಿಕ ಕಲಾಪ್ರಾಕಾರಗಳ ಕಾರ್ಯಕ್ರಮಗಳಿಗೆ ಆರ್ಥಿಕವಾದ ಧನಸಹಾಯ ಮಾಡುತ್ತದೆ. ಆದರೆ ಸಂಚಲನದಂತಹ ಸಂಸ್ಥೆಗಳು ಮಾತ್ರ ಇಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುತ್ತವೆ ಎಂದ ಸಂಚಲನದ ಕಾರ್ಯವೈಖರಿಯನ್ನು ಶ್ಲಾಘಿಸಿದರು.

Click here

Call us

Call us

ಕುಂದಾಪುರ ಕೊರಗರ ಶ್ರೇಯಾಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ಕೊರಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ವಾಹಕ ಗಣಪತಿ ಹೋಬಳಿದಾರ್ ಪ್ರಾಸ್ತಾವಿಸಿದರು. ಸಂಚಲನದ ಕಾರ್ಯದರ್ಶಿ ನಾಗಪ್ಪ ಮರಾಠಿ ಸ್ವಾಗತಿಸಿದರು. ಅಧ್ಯಕ್ಷ ತಿಮ್ಮ ಮರಾಠಿ ವಂದಿಸಿದರು. ನುಡಿಗಳನ್ನಾಡಿದರು, ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಬೈಂದೂರು ಮಹಾತ್ಮ ಜ್ಯೋತಿ ಬಾಪುಲೆ ಕೊರಗರ ಯುವ ವೇದಿಕೆಯಿಂದ ಕೊರಗರ ಜನಪದ ವೈಭವ ಹಾಗೂ ಸಂಚಲನ ಹೊಸೂರು ಬಡಕಟ್ಟು ಕಲಾವಿದರಿಂದ ಷಾಪುರದ ಸೀನಿಂಗ ಸತ್ಯಕಥೆ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

four × four =