ಹೊಸ ಓದಿಗೆ ಬೇಕಿದೆ ಹೊಸ ಬರಹ

Call us

Call us

ಶ್ರೀನಿವಾಸ್.

Call us

Call us

Call us

Orphan 11yo Harry=wizard! Off 2wizard skool. Temp defeats Lord Voldie (whohe?)+ 3 headed dog 2 bag the stone.

Call us

Call us

ಇದೇನು ಎಂದೇನು ಎಂದು ಯೋಚಿಸುತ್ತಿದ್ದೀರಾ? ಇದು ಇಂಗ್ಲಿಷಿನ ಪ್ರಸಿದ್ಧ ‘ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್’ನ ಸಂಕ್ಷಿಪ್ತ ಸ್ವರೂಪ. ಲಂಡನ್‌ನಸೂತರ್‌ಲ್ಯಾಂಡ್ ವಿಶ್ವವಿದ್ಯಾನಿಲಯದ ಪ್ರೊ. ಜಾನ್ ಸುತರ್‌ಲ್ಯಾಂಡ್ ಅವರು ಸುಮಾರು 200 ಪುಟಗಳ ಕಥೆಯನ್ನು 140 ಅಕ್ಷರಗಳಿಗೂ ಕಡಿಮೆ ಗಾತ್ರಕ್ಕೆ ಇಳಿಸುವ ಸಾಹಸನಡೆಸಿದ್ದಾರೆ. ಇದೊಂದೇ ಅಲ್ಲ, ಹತ್ತಾರು ಕಾದಂಬರಿಗಳು ಈಗಾಗಲೇ ಟ್ವಿಟರ್ ಹಾಗೂ ಎಸ್ಎಂಎಸ್‌ಗಳಲ್ಲಿ ಹಿಡಿಸುವ ಜಾಗಕ್ಕೆ ಸಂಕುಚಿತಗೊಂಡಿವೆ.

ಮೇಲಿನ ಸಾಲು ಏನೆಂದು ಅರ್ಥವಾದರೆ, ನೀವು ಯುವ ಪೀಳಿಗೆಯ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದೀರಿ ಎಂದರ್ಥ. ಅಭಿನಂದನೆಗಳು. ಇಲ್ಲವಾದಲ್ಲಿಒಂದಿಷ್ಟು ಕಲಿತುಕೊಳ್ಳುವುದು ಒಳ್ಳೆಯದು. ಇದ್ಯಾವ ಸೀಮೆ ಭಾಷೆರೀ, ಇದನ್ನು ಓದಿ ಯಾರಾದರೂ ಖುಷಿ ಪಡೋಕೆ ಆಗುತ್ತಾ ಎಂದು ಬೈಯ್ಯುವುದಕ್ಕೆ ಮುಂಚೆ,ಸುದರ್‌ಲ್ಯಾಂಡ್ ಅವರ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇತ್ತೀಚಿನ ಅಧ್ಯಯನಗಳಪ್ರಕಾರ 18ರಿಂದ 25ರ ವಯೋಮಾನದವರೆಗಿನ ಯುವ ಪೀಳಿಗೆ ಪುಸ್ತಕವನ್ನುಹಿಡಿಯುವುದಕ್ಕಿಂತ ಸಾಮಾಜಿಕ ಮಾಧ್ಯಮ ತಾಣಗಳು ಹಾಗೂ ಅಂತರ್ಜಾಲದಲ್ಲಿ ಹೆಚ್ಚು ಸಮಯ ಕಳೆಯಲು ಬಯಸುತ್ತದೆ. ಅವರಿಗೆ ಪುಟಗಳ ಲೆಕ್ಕದಲ್ಲಿ ಅಳೆಯುವ ಸಾಹಿತ್ಯಪಥ್ಯವಾಗುತ್ತಿಲ್ಲ, ಅಕ್ಷರಗಳ ಲೆಕ್ಕದಲ್ಲಿರುವ ಮೆಸೇಜ್‌ಗಳು ಬೇಕಿವೆ. ಈ ಕಾರಣಕ್ಕಾಗಿ ಸುದರ್‌ಲ್ಯಾಂಡ್ ಸಾಹಿತ್ಯ ಒಂದು ಝಲಕ್ ಅನ್ನು ಒಂದು ಸಾಲಿನ ಸಂಕ್ಷಿಪ್ತ ರೂಪಕ್ಕೆ ತಂದುಸಾಮಾಜಿಕ ಮಾಧ್ಯಮಗಳಲ್ಲಿ ಹರಡಿ ಯುವಕರಲ್ಲಿ ಆಸಕ್ತಿ ಕೆರಳಿಸುವ ಪ್ರಯತ್ನ ನಡೆಸಿದ್ದಾರೆ.

ವಿಶ್ವದಾದ್ಯಂತ ಈಗ ಯುವ ಪೀಳಿಗೆಯ ಕಲಿಕೆ ಆಸಕ್ತಿ ಬದಲಾಗುತ್ತಿದೆ. ಇತ್ತೀಚಿನ ಶಿಕ್ಷಣ ಪದ್ಧತಿಯಲ್ಲಿ ಸುದೀರ್ಘ ಉತ್ತರಗಳಿಗಿಂತ ‘ಟಿಕ್’ ಉತ್ತರಗಳನ್ನು ಪಡೆದು ಒಕೆ ಎಂದುಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುತ್ತಿದೆ. ಅಕ್ಷರ ಮಾಧ್ಯಮ ಹಿಂದೆ ಸರಿದು ದೃಶ್ಯ, ಸಾಮಾಜಿಕ ತಾಣಗಳ ಮಾಧ್ಯಮಗಳು ಪ್ರಬಲವಾಗುತ್ತಿವೆ. 140ಕ್ಕಿಂತ ಇನ್ನೊಂದುಪದ ಹೆಚ್ಚು ಹೇಳಿದರೂ, ‘ಏನ್ ಕೊರಿತಾನೇ ಮಾರಾಯ’ ಎಂದು ಯುವಕರು ಕೈಯಲ್ಲಿರುವ ಟಚ್ ಸ್ಕ್ರೀನ್ ಮೊಬೈಲ್ ಅನ್ನು ನಲ್ಲೆಯ ಕೆನ್ನೆ ಏನೋ ಎಂಬಂತೆ ಸವರುತ್ತಾನಿಮ್ಮನ್ನು ಮರೆತೇ ಬಿಡುತ್ತಾರೆ.

ಯುವ ಪೀಳಿಗೆ ಅರ್ಥ ಮಾಡಿಕೊಳ್ಳುವ ಪದಗಳ ಪಟ್ಟಿಯೂ ಬದಲಾಗಿದೆ. ಮೊನ್ನೆಯಷ್ಟೇ ‘ವಚನಗಳ ಮರು ಓದು’ ಎಂಬ ಕಮ್ಮಟದಲ್ಲಿ ಭಾಗಿಯಾಗಿದ್ದೆ. ಅಲ್ಲಿದ್ದ ಕಾಲೇಜು ಮಟ್ಟದವಿದ್ಯಾರ್ಥಿಗೆ, ಲೋಭ, ಮದ, ಪ್ರಸ್ತುತ ಇಂತಹ ಪದಗಳ ಅರ್ಥವೇ ಗೊತ್ತಿರಲಿಲ್ಲ. ಅಷ್ಟೇ ಏಕೆ, ಗೋಷ್ಠಿ – ಕಮ್ಮಟಗಳೂ ಸಹ ಗೊತ್ತಿಲ್ಲ. ಹಾಗೆಂದ ಮಾತ್ರಕ್ಕೆ ಆತನಲ್ಲಿ ಶಬ್ದಸಂಪತ್ತಿನ ಕೊರತೆ ಇದೆ ಎಂದಲ್ಲ. LOL, ASAP, RIP, 2b… ಈ ರೀತಿಯ ಪದಗಳು ಸಲೀಸಾಗಿ ಅರ್ಥವಾಗುತ್ತವೆ. ಇದನ್ನುಅರ್ಥ ಮಾಡಿಕೊಳ್ಳಲು ನಮ್ಮಂಥಮಧ್ಯವಯಸ್ಸಿನವರು ಅರ್ಬನ್ ಡಿಕ್ಷನರಿ ಹಿಡಿದುಕೊಂಡು ಕುಳಿತುಕೊಳ್ಳಬೇಕು.

ಯುವ ಪೀಳಿಗೆ ಸಾಹಿತ್ಯದ ಕಡೆ ಬರಲು ಈಗ ನಾವೇನು ಮಾಡಬೇಕು? ಕನ್ನಡ ಮಾತನಾಡುವಾಗ ಇಂಗ್ಲಿಷ್ ಪದ ಬಂದರೆ ಕಲಬೆರಕೆ ಎಂದು ಭಾವಿಸುವ ಜನರಿದ್ದಾರೆ.ಹೀಗಿರುವಾಗ ಇಂಗ್ಲೀಷಿನ ‘ಮೊಬೈಲ್ ಚುಟುಕು ಭಾಷೆ’ ಸಾಹಿತ್ಯದಲ್ಲಿ ಸೇರಿಸುವುದನ್ನು ‘ಪಂಡಿತರು’ ಒಪ್ಪುವರೇ? ಬ್ರಿಟನ್ನಿನಲ್ಲಿ ಷೇಕ್ಸ್‌ಪಿಯರ್‌ನ ನಾಟಕಗಳನ್ನೂ ಸಹ ಮೊಬೈಲ್ಚುಟುಕು ಭಾಷೆಗೆ ‘ಅನುವಾದ’ ಮಾಡಲಾಗಿದೆ. ಷೇಕ್ಸ್‌ಪಿಯರ್‌ನ ಕೃತಿಗಳು ಅಜರಾಮರ ಎನ್ನಲಾಗುತ್ತಿತ್ತು. ಆದರೆ, ಅಂತಹ ಷೇಕ್ಸ್‌ಪಿಯರ್‌ ಈಗ 21ನೇ ಶತಮಾನದ ಕಾಲದಹೊಡೆತಕ್ಕೆ ಸಿಲುಕಿದ್ದಾನೆ. ನಮ್ಮ ರನ್ನ, ಪಂಪ, ಜನ್ನ, ಇತ್ಯಾದಿಗಳ ಗತಿ ಏನಾಗಲಿದೆಯೋ ಗೊತ್ತಿಲ್ಲ.

ವಚನ ಸಾಹಿತ್ಯ ಸಹ ಅತ್ಯಂತ ಸರಳ, ಕನ್ನಡದಲ್ಲಿದೆ ಎನ್ನಲಾಗುತ್ತದೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಾಧಾರಣ ಸಾಹಿತ್ಯದ ನೀರನ್ನೇ ಕುಡಿಸಲಾಗುತ್ತಿಲ್ಲ. ಇನ್ನುವಚನಗಳೆಂಬ ಸಿಹಿ ಕಡುಬುಗಳನ್ನು ತುರುಕುವುದು ಸಾಧ್ಯವೇ? ವಚನದಂತಹ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾದರೆ, ಅವರಿಗೆ ಓದುವುದನ್ನು ಕಲಿಸುವಪ್ರಯತ್ನದ ಜೊತೆಗೆ ‘ಪಂಡಿತರು’ ಹೊಸದಾಗಿ ಬರೆಯುವುದನ್ನು ಕಲೆಯುವ ಅಗತ್ಯವಿದೆ ಎನ್ನಿಸುತ್ತದೆ.

ರಷ್ಯಾದ ಪ್ರಸಿದ್ಧ ಕಾದಂಬರಿಕಾರ ಟಾಲ್‌ಸ್ಟಾಯ್ ಅವರ ಪ್ರಸಿದ್ಧ ‘ಅನ್ನಾ ಕರೇನಿನಾ’ ದೀರ್ಘ ಕಾದಂಬರಿ ಓದಲು ಹಿಂಜರಿಯುತ್ತಿದ್ದೆ. 19ನೇ ಶತಮಾನದ ಕಾಲದ ಆ ಭಾಷೆ ನನಗೆಅರ್ಥವಾಗುವುದಿಲ್ಲ ಎಂದುಕೊಂಡಿದ್ದೆ. ಆಗ, ನನ್ನ ಪರಿಚಯದ ಸಾಹಿತ್ಯಾಸಕ್ತರೊಬ್ಬರು ಧೈರ್ಯ ತುಂಬಿ, ಭಾಷೆ ಸರಳವಾಗಿದೆ ಓದು ಎಂದಿದ್ದರು. ನಂತರ ಅದನ್ನು ಓದಿದಾಗ,ಅದರಲ್ಲಿನ ಅವರು ಹೇಳಿದ್ದು ನಿಜ ಅನ್ನಿಸಿತು. ಅದೇ ಧೈರ್ಯದ ಮೇಲೆ ಚಾರ್ಲಸ್ ಡಿಕನ್ಸ್ ಅವರ ‘ಟೇಲ್ ಆಫ್ ಟು ಸಿಟೀಸ್’ ಓದುವ ಪ್ರಯತ್ನಕ್ಕೆ ಕೈ ಹಾಕಿ ಸುಸ್ತಾಗಿ ಹೋದೆ.ನಂತರ ಅಂತರ್ಜಾಲದಲ್ಲಿ ಪರಿಶೀಲಿಸಿದಾಗ ತಿಳಿದುಬಂದ ವಿಷಯ ಎಂದರೆ, ಟಾಲ್‌ಸ್ಟಾಯ್ ಅವರ ರಷ್ಯನ್ ಭಾಷೆಯ ‘ಅನ್ನಾ ಕರೇನಿನಾ’ ಕಳೆದ ಶತಮಾನದಲ್ಲಿ ಒಂದುಬಾರಿಯಲ್ಲ ಐದು ಬಾರಿ ಪ್ರಮುಖ ಅನುವಾದಗಳನ್ನು ಕಂಡಿದೆ! ಪ್ರತಿಯೊಂದು ಪೀಳಿಗೆ ಬದಲಾದಂತೆ ಜನರುಬಳಸುವ ಮಾತುಗಳು ಬದಲಾಗುತ್ತವೆ. ಅದಕ್ಕೆ ಅನುಗುಣವಾಗಿ‘ಅನ್ನಾ ಕರೇನಿನಾ’ದಂತಹ ಕೃತಿ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಮರು ಅನುವಾದಕ್ಕೆ ಒಳಗಾಗುತ್ತದೆ. ಆದರೆ, ‘ಟೇಲ್ ಆಫ್ ಟು ಸಿಟೀಸ್’ ರಷ್ಯಾದ ಕೃತಿಯಲ್ಲ, ಅದುಇಂಗ್ಲೀಷಿನದು. ಹೀಗಾಗಿ ಅದು ಅನುವಾದಗೊಂಡಿಲ್ಲ. ಶತಮಾನಗಳ ಹಳೆಯ ಭಾಷೆ ಓದುವುದು ಸುಲಭವಲ್ಲ. ಇದಾದ ನಂತರ 18ನೇ ಶತಮಾನದ ಯಾವುದೇ ಇಂಗ್ಲಿಷ್ಕೃತಿಯನ್ನು ಓದುವ ಸಾಹಸಕ್ಕೆ ಕೈ ಹಾಕಿಲ್ಲ.

ಮತ್ತೆ ವಚನಗಳ ವಿಷಯಕ್ಕೆ ಬರುವುದಾದರೆ, ಅದರಲ್ಲಿರುವ ಪದಗಳು, ನಿಗೂಢ ಅರ್ಥಗಳನ್ನು ಅರಿಯುವುದು ಸುಲಭವಲ್ಲ. ಎರಡೆರಡು ಶಬ್ದಕೋಶಗಳನ್ನು ಮುಂದಿಟ್ಟುಕೊಂಡುತಡಕಾಡಿದರೂ ಕೆಲವು ವಚನಗಳು ಅರ್ಥವಾಗಲಿಲ್ಲ. ಸಾಹಿತ್ಯ ಬಗ್ಗೆ ಒಂದಿಷ್ಟು ಅಭಿರುಚಿ ಇರುವವರ ಪಾಡೇ ಹೀಗೆ. ಇನ್ನು ಸಾಹಿತ್ಯ ಎಂದರೆ ಮೈಲು ದೂರ ಓಡುವ ಯುವಪೀಳಿಗೆಯನ್ನು ಹಿಡಿದು ತಂದು, ವಚನಗಳನ್ನು ಓದಿಸುವುದು ಸುಲಭದ ಸಾಹಸವಲ್ಲ. ಹೊಸ ಪೀಳಿಗೆಯ ಭಾಷಾ ಸಂಪತ್ತು, ಆಸಕ್ತಿ, ಓದುವ ಶೈಲಿಗಳನ್ನುಅರಿತು ವಚನಗಳನ್ನು‘ಮರು ಬರೆ’ದಾಗ ಮಾತ್ರ ಅದರ ‘ಮರು ಓದು’ ಸಾಧ್ಯವಾಗುತ್ತದೆ ಎನ್ನಿಸುತ್ತದೆ. ಮಾರ್ಕೆಟಿಂಗ್ ಭಾಷೆಯಲ್ಲಿಹೇಳುವುದಾದರೆ, ‘ಗ್ರಾಹಕನೇ ರಾಜ’. ಯುವ ಪೀಳಿಗೆ ಎಂಬಗ್ರಾಹಕರಲ್ಲಿ ತಪ್ಪುಗಳನ್ನು ಹುಡುಕುವ ಬದಲು, ಅವರಿಗೆ ಸರಳವಾಗಿ ಅರ್ಥವಾಗುವ ಹಾಗೆ ವಚನದಂತಹ ಸಾಹಿತ್ಯವನ್ನು ಮರು ಬರೆಯುವ ಸಾಹಸಕ್ಕೆ ಕೈ ಹಾಕುವ ‘ಪದ’ವೀರರಅಗತ್ಯ ತುರ್ತಾಗಿದೆ.

Leave a Reply

Your email address will not be published. Required fields are marked *

11 − 5 =