ಅಪಘಾತದಲ್ಲಿ ಮಡಿದ ಮಕ್ಕಳಿಗೆ ಮುಸ್ಲಿಬಾಂಧವರಿಂದ ಶ್ರದ್ಧಾಂಜಲಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಡೆಯ ಬಾರದ ಕರಾಳ ಘಟನೆಯೊಂದು ನಡೆದು ಹೋಗಿದೆ ಇನ್ನೂ ಅರಳದ ದೇವರ ತೋಟದ ಕುಸಮಗಳು ಮುದುಡಿಹೋಗಿವೆ. ಆ ಮುಗ್ಧ ಕಂದಮ್ಮ ಗಳ ಪುನೀತ ಆತ್ಮಗಳಿಗೆ ದೇವರ ಆಸ್ಥಾನದಲ್ಲಿ ಶಾಂತಿ ಲಭಿಸಲಿ, ಹೊತ್ತಲ್ಲದ ಹೊತ್ತಿನಲ್ಲಿ ತಮ್ಮ ಕರುಳ ಕುಡಿಗಳನ್ನು ಅಗಲಿರುವ ಮಕ್ಕಳ ಹೆತ್ತವರಿಗೆ, ಪೋಷಕರಿಗೆ ಆ ಅಲ್ಲಾಹು ನೋವನ್ನು ಮಣಿಸುವ , ಸಹಿಸುವ ಶಕ್ತಿಯನ್ನು ನೀಡಲಿ ಎಂದು ಕುಂದಾಪುರ ಜಾಮೀಯಾ ಮಸೀದಿಯ ಖತೀಬರಾದ ಜನಾಬ್ ಅಬ್ದುಲ್ ರಹಿಮಾನ್ ಹೇಳಿದರು.

Click Here

Call us

Call us

ತ್ರಾಸಿ ಶಾಲಾ ಮಕ್ಕಳ ದುರಂತದ ಶುಕ್ರವಾರದ ಜುಮ್ಮಾ ನಮಾಜಿನ ನಂತರ ಖತೀಬರ ಉಪಸ್ಥಿತಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಊರ ಪರವೂರ ಅಸಂಖ್ಯಾತ ಮುಸ್ಲಿಮ್ ಬಾಂಧವರು ಮರೆಯಾದ ಮುಗ್ಧ, ಪುಟ್ಟ ಜೀವಗಳಿಗೆ ಶೃದ್ಧಾಂಜಲಿ ಕೋರಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಅಂಜುಮನ್ ಮುಸ್ಲಿಮೀನ್ ಸಂಸ್ಥೆ, ಜಮ್ಯಿಯತುಲ್, ಫಲ್ಹಾ, ಮುಸ್ಲಿಮ್ ವೆಲ್ ಫೆರ್ ಘಟಕಗಳೂ ಭಾಗವಹಿಸಿ ತಮ್ಮ ಆಶ್ರುತರ್ಪಣವನ್ನು ಸಲ್ಲಿಸಿದ್ದರು.

Click here

Click Here

Call us

Visit Now

Leave a Reply

Your email address will not be published. Required fields are marked *

17 − 15 =