ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುಪಿಎ ಸರಕಾರದ ಅವಧಿಯಲ್ಲಿ ಬೆಂಗಳೂರು – ಮೈಸೂರು – ಕಾರವಾರ ರೈಲುನ್ನು ಪ್ರಾರಂಭಿಸಲಾಗಿತ್ತು. ಬೆಂಗಳೂರು – ಕಾರವಾರ ನೇರ ರೈಲು ಕಾರಣಾಂತರಗಳಿಂದ ರದ್ದಾಗಿ ಬಳಿಕ ಮಂಗಳೂರು ತನಕ ಮಾತ್ರ ಸಂಚರಿಸುತಿತ್ತು. ಈಗ ಅದೇ ರೈಲು ಮುರುಡೇಶ್ವರದ ತನಕ ವಿಸ್ತರಣೆಗೊಂಡಿದೆ. ಈ ರೈಲಿನ ವೇಳಾಪಟ್ಟಿ ಪರಿಷ್ಕರಿಸಿದರೆ ಮತ್ತು ಪ್ರತ್ಯೇಕ ರೈಲು ಆರಂಭಿಸಿದರೆ ಕರಾವಳಿ ಜನತೆಗೆ ಅನೂಕೂಲವಾಗಲಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಬೆಂಗಳೂರು – ಮೈಸೂರು – ಮುರ್ಡೇಶ್ವರ ರೈಲಿನ ವೇಳಾಪಟ್ಟಿ ಪರಿಷ್ಕರಿಸಿದರೆ ಮಾತ್ರ ಕರಾವಳಿ ಜನತೆಗೆ ಅನೂಕೂಲವಾಗಲಿದೆ . ರಾತ್ರಿ 8-15 ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮದ್ಯಾಹ್ನ 11 -54 ಕ್ಕೆ ಕುಂದಾಪುರಕ್ಕೆ ಬರಲಿದೆ. ಕುಂದಾಪುರದಿಂದ ಮದ್ಯಾಹ್ನ 3 – 10 ಕ್ಕೆ ಹೊರಟು ಬೆಳಿಗ್ಗೆ 7-15 ಕ್ಕೆ ಬೆಂಗಳೂರು ತಲುಪಲಿದೆ.
ಈ ವೇಳಾಪಟ್ಟಿ ಬೆಂಗಳೂರಿಗೆ ತೆರಳುವ ಕುಂದಾಪುರ ಮತ್ತು ಕರಾವಳಿಗರಿಗೆ ಅನೂಕೂಲವಾಗಿಲ್ಲ. ರಾತ್ರಿ ಹೊರಟು ಬೆಳಿಗ್ಗೆ ಕುಂದಾಪುರ – ಬೆಂಗಳೂರು ತಲುಪುವುದಿದ್ದರೆ ಮಾತ್ರ ಕರಾವಳಿಗರಿಗೆ ಅನೂಕೂಲ. ಪಂಚಗಂಗಾ ಎಕ್ಸಪ್ರೆಕ್ಸ ರೈಲಿನ ಟಿಕೆಟ್ 15 ದಿನಗಳ ಮೊದಲೇ ಬುಕ್ ಆಗುತ್ತಿದೆ. ಪ್ರಸ್ತುತ ಸಂಚರಿಸುತ್ತಿರುವ ರೈಲನ್ನೇ ಹಿಂದೆ ಇರುವಂತೆ ಮುಂದುವರಿಸಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಹೊಸ ರೈಲು ಪ್ರಾರಂಭವೆಂದು ಜನರ ದಿಕ್ಕು ತಪ್ಪಿಸಿ ಸಂಭ್ರಮಿಸುವುದು ಬೇಡ ಎಂದಿದ್ದಾರೆ.
ಜಿಲ್ಲೆಯ ಬಿಜೆಪಿ ಶಾಸಕರಿಗೆ ಮತ್ತು ಜಿಲ್ಲೆಯ ಸಂಸದರಾಗಿ ಕೇಂದ್ರ ಸಚಿವರಾದವರಿಗೆ ಕರ್ತವ್ಯದ ಮೇಲೆ ಬದ್ಧತೆ ಇದ್ದರೇ ವಂದೇ ಮಾತರಂ ಅಥವಾ ಯಾವುದೇ ಒಂದು ಹೊಸ ರೈಲನ್ನು ಕರಾವಳಿಯಿಂದ ಬೆಂಗಳೂರಿಗೆ ಜನರಿಗೆ ಅನುಕೂಲವಾಗುವ ವೇಳಾಪಟ್ಟಿಯಂತೆ ಪ್ರಾರಂಭಿಸಲಿ ಎಂದು ಅವರು ಆಗ್ರಹಿಸಿದ್ಧಾರೆ.
ಇದನ್ನೂ ಓದಿ:
► ಬೆಂಗಳೂರು ಮೈಸೂರು ಮುರ್ಡೇಶ್ವರ ರೈಲಿಗೆ ಕುಂದಾಪುರ, ಬೈಂದೂರಿನಲ್ಲಿ ಸ್ವಾಗತ – https://kundapraa.com/?p=69050 .