ಸಂಘಟನೆ ಬಲಿಷ್ಠವಾದರೆ ಇತಿಹಾಸ ಬದಲಿಸಲು ಸಾಧ್ಯ: ಶಿಕ್ಷಣ ಸಚಿವ ಬಿ. ಸಿ. ನಾಗೇಶ್

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವ್ಯಕ್ತಿಗಿಂತ ಸಂಘಟನೆ ದೊಡ್ಡದು ಎಂಬ ಸಿದ್ಧಾಂತ ಹೊಂದಿದ ಭಾರತೀಯ ಜನತಾ ಪಕ್ಷ, ಸಂಘಟನೆಯ ಉದ್ದೇಶವಿರಿಸಿಕೊಂಡು ಪರಿಶುದ್ಧ ರಾಜಕೀಯದ ಮೂಲಕ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಂಘಟನೆ ಬಲಿಷ್ಠವಾದರೆ ಇತಿಹಾಸ ಬದಲಿಸಲು ಸಾಧ್ಯ ಎಂಬ ಕಾರಣಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲ ಸೌಕರ‍್ಯಗಳನ್ನು ತಲುಪಿಸುವ ಜವಾಬ್ದಾರಿ ಸಂಘಟನೆಯದ್ದಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದರು.

Call us

Click Here

Click here

Click Here

Call us

Visit Now

Click here

ಉಪ್ಪುಂದ ಮಾತೃಶ್ರಿ ಸಭಾಭವನದಲ್ಲಿ ಬುಧವಾರ ಬಿಜೆಪಿ ಬಂದೂರು ಮಂಡಲದ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನರೇಂದ್ರ ಮೋದಿ ಅವರು ಶ್ರೇಷ್ಠ ನಾಯಕರಾಗಿದ್ದು, ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ಒಂದು ವಾರಗಳ ಕಾಲ ಪಂಡಿತ ದೀನ್‌ದಯಾಳ್ ಅವರ ’ಅಂತ್ಯೋದಯವೇ ನಮ್ಮೆಲ್ಲರ ಜೀವನದ ಪರಮಗುರಿ’ ಎನ್ನುವ ಮಾತಿನಂತೆ ಸಂಘಟನೆಯು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಈ ಧ್ಯೇಯವನ್ನಾಧರಿಸಿ ಬಂದೂರು ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಮರ್ಪಣಾ ಭಾವದಿಂದ ವಿವಿಧ ಸೇವಾ ಕಾರ್ಯವನ್ನು ಮಾಡುತ್ತಿರುವುದು ಅನುಕರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಬಂದೂರು ಬಿಜೆಪಿಯ ಸಂಘಟನೆಯು ಬಲಿಷ್ಠವಾಗಿದ್ದು, ಪಕ್ಷವು ನೀಡುವ ಎಲ್ಲ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ಕಾರ್ಯಾರೂಪಕ್ಕೆ ತರಲಾಗುತ್ತಿದೆ. ಆರೋಗ್ಯ ತಪಸಣಾ ಶಿಬಿರದಿಂದ ಈ ಭಾಗದ ಜನ ಸಾಮಾನ್ಯರಿಗೆ ಅನುಕೂಲವಾಗಿದೆ ಎಂದರು.

ಉಪ್ಪುಂದ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಖಾರ್ವಿ, ಬೈಂದೂರು ಆರೋಗ್ಯ ವೈದ್ಯಾಧಿಕಾರಿ ಡಾ. ಮಹೇಂದ್ರ ಕುಮಾರ್ ಶೆಟ್ಟಿ, ಮುಖಂಡರಾದ ಸುರೇಶ ಬಟವಾಡಿ, ಎ. ಆನಂದ ಖಾರ್ವಿ ಉಪ್ಪುಂದ, ಪ್ರಕಾಶ ಪೂಜಾರಿ, ಶ್ರೀಗಣೇಶ ಗಾಣಿಗ ಉಪ್ಪುಂದ, ಮಂಜುನಾಥ ದೇವಾಡಿಗ, ಜಗನ್ನಾಥ ಮೋಗವಿರ, ಅನಿತಾ ಆರ್.ಕೆ., ಶ್ರೀಧರ ಗಾಣಿಗ, ವಿನೋದ್ ಗುಜ್ಜಾಡಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಬಂದೂರು ಮಂಡಲದ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

six + 20 =