ಉಡುಪಿ ಜಿಲ್ಲೆ ಕೋವಿಡ್ ಅಪ್ಡೇಟ್: ಮಂಗಳವಾರ 11 ಪಾಸಿಟಿವ್ ದೃಢ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.23ರ ಮಂಗಳವಾರ 11 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢವಾಗಿದೆ.  ಒಟ್ಟು ಪ್ರಕರಗಳಲ್ಲಿ ಒಂದು ಪ್ರಕರಣ ಪಿ-2047  ಸಂಪರ್ಕದಿಂದ ಬಂದಿದ್ದು, 4  ಪ್ರಕರಣ ದುಬೈ, ಕುವೈತ್ ಹಾಗೂ ಸೌದಿ ಅರೆಬಿಯಾದಿಂದ ಹಿಂದಿರುಗಿದವರು ಹಾಗೂ 6 ಪ್ರಕರಣ ಮುಂಬೈನಿಂದ ಹಿಂದಿರುಗಿದವರಿಂದ ಬಂದಿದೆ. ಈ ಪೈಕಿ 4 ಪುರುಷರು, 3 ಮಹಿಳೆಯರು, 4 ಮಕ್ಕಳು ಸೇರಿದ್ದಾರೆ.

ಇಂದು 47 ನೆಗೆಟಿವ್:
ಈ ತನಕ ಒಟ್ಟು 13,626 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,182 ನೆಗೆಟಿವ್, 1088 ಪಾಸಿಟಿವ್ ಬಂದಿದ್ದು, 356 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 47 ನೆಗೆಟಿವ್, 11 ಪಾಸಿಟಿವ್ ಬಂದಿದೆ.

108 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಸದ್ಯ ಒಟ್ಟು 1088ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 978 ಮಂದಿ ಬಿಡುಗಡೆಯಾಗಿದ್ದು, 108 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

ಇದನ್ನೂ ಓದಿ:
ಕಲ್ಪರಸ: ಕುಂದಾಪುರದಲ್ಲಿ ರಾಜ್ಯದ ಎರಡನೇ ನೀರಾ ಘಟಕ – https://kundapraa.com/?p=38905 .

Leave a Reply

Your email address will not be published. Required fields are marked *

3 × 3 =