ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ವೇದಮೂರ್ತಿ ಕಟ್ಟೆ ಶಂಕರ ಭಟ್ ಹಾಗೂ ಕುಲ ಪುರೋಹಿತ ಸುಬ್ರಹ್ಮಣ್ಯ ಭಟ್ ಬಾಡ ಇವರ ನೇತೃತ್ವದಲ್ಲಿ ನಡೆಯಿತು.
ಭಾಗೀರಥಿ ಮತ್ತು ಹೆಚ್.ಆರ್.ಶಶಿಧರ್ ನಾಯ್ಕ್ ಚನ್ನಗಿರಿ ಹಾಗೂ ಮೀನಾಕ್ಷಿ ಮತ್ತು ಕೊರಗ ಹೋಬಳಿದಾರ್ ಅವರ ಪರವಾಗಿ ನಿರ್ಮಲ ನಾಗರಾಜ ಹೋಬಳಿದಾರ್ ಮತ್ತು ಮಕ್ಕಳು ಪಡುವರಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಸೇವಾಕರ್ತರಾಗಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.