ಉಡುಪಿ ಜಿಲ್ಲೆ ಕೋವಿಡ್ ಅಪ್ಡೇಟ್: ಶನಿವಾರ 14 ಪಾಸಿಟಿವ್ ದೃಢ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜೂ.27ರಶನಿವಾರ 14 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢವಾಗಿದೆ. ಈ ಪೈಕಿ 7 ಪುರುಷರು, 6 ಮಹಿಳೆಯರು ಹಾಗೂ ಓರ್ವ 6 ವರ್ಷದ ಹುಡುಗಿಗೆ ಪಾಸಿಟಿವ್ ದೃಢವಾಗಿದೆ.

ಇಂದು 173 ನೆಗೆಟಿವ್:
ಈ ತನಕ ಒಟ್ಟು 14,127ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 12,656ನೆಗೆಟಿವ್, 1,139 ಪಾಸಿಟಿವ್ ಬಂದಿದ್ದು, 332 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 173ನೆಗೆಟಿವ್, 14ಪಾಸಿಟಿವ್ ಬಂದಿದೆ.

90 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 1,139 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1047 ಮಂದಿ ಬಿಡುಗಡೆಯಾಗಿದ್ದು, 90 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.

 

Leave a Reply

Your email address will not be published. Required fields are marked *

three × 5 =