ಚುನಾವಣೆ: ಜಿಲ್ಲಾದ್ಯಂತ ವಿಜಯೋತ್ಸವಕ್ಕೆ ಬ್ರೇಕ್. 2 ದಿನ ನಿಷೇಧಾಜ್ಞೆ ಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಜಿಲ್ಲಾದ್ಯಂತ ವಿಜಯೋತ್ಸವ ಆಚರಿಸಲು ಕಾತರರಾಗಿರುವ ವಿವಿಧ ಪಕ್ಷಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಚುನಾವಣಾ ಫಲಿತಾಂಶದ ಬಳಿಕ ಜಿಲ್ಲೆಯಲ್ಲಿ ಗಲಭೆಯಾಗುವ ಸಂಭವ ಹೆಚ್ಚಿರುವುದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಣಯ ಕೈಗೊಂಡಿದ್ದು, ಮೇ15ರ ಬೆಳಿಗ್ಗೆ 6ಗಂಟೆಯಿಂದ ಮೇ.17ರ ಬೆಳಿಗ್ಗೆ 6ಗಂಟೆಯ ತನಕ ಸೆಕ್ಷನ್ 144 ಜಾರಿಗೊಳಿಸಿದೆ.

ನಿಷೇಧಾಜ್ಞೆಯ ಸಂದರ್ಭ ಗುಂಪು ಜನ ಸೇರುವುದು, ವಿಜಯೋತ್ಸವ ನಡೆಸುವುದು, ಸಭೆ ಸಮಾರಂಭಗಳನ್ನು ಆಯೋಜಿಸುವುದು, ಪರ-ವಿರೋಧ ಘೋಷಣೆ ಕೂಗುವುದು, ಸಂಜ್ಞೆ, ಚೇಷ್ಟೆ ಮಾಡುವುದು, ಚಿತ್ರ ಪ್ರದರ್ಶಿಸುವುದು ಪಟಾಕಿ ಸಿಡಿಸುವುದು ಸೇರಿದಂತೆ ಎಲ್ಲವನ್ನೂ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

20 − sixteen =