ಬೈಂದೂರು: ಜುಗಾರಿ ಆಡುತ್ತಿದ್ದ 15 ಮಂದಿಯ ಬಂಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.4:
ತಾಲೂಕಿನ ಯಳಜಿತ್ ಗ್ರಾಮದ ಗುಳ್ನಾಡಿ ಹಾಡಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ವೀಟ್ ಜುಗಾರಿ ಆಡುತ್ತಿದ್ದ 15 ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

Call us

Call us

ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ತೆರಳಿದ ಪೊಲೀಸರು ಸ್ಥಳವನ್ನು ಸುತ್ತುವರಿದ್ದಾರೆ. ಈ ವೇಳೆ ಆಟವಾಡುತ್ತಿದ್ದ ರಾಘವೇಂದ್ರ ಪೂಜಾರಿ, ಮೋಹನ ಕೊಠಾರಿ, ದಯಾನಂದ ಗೌಡ, ಗಣಪತಿ ಗೌಡ , ರಾಘವೇಂದ್ರ ದೇವಾಡಿಗ, ಚಂದ್ರ ನಾಯ್ಕ, ಗಣೇಶ ನಾಯ್ಕ, ರಮೇಶ ನಾಯ್ಕ, ಕರುಣಾಕರ ಕೊಠಾರಿ, ಸಂತೋಷ ಕೊಠಾರಿ, ಮಧು ಬಳೆಗಾರ, ಸುಧಾಕರ ಕೊಠಾರಿ, ದಿನೇಶ ಕೊಠಾರಿ, ಕೃಷ್ಣ ಗೌಡ, ಜಯಾ ಗೌಡ ಎಂಬುವವರನ್ನು ವಶಕ್ಕೆ ಪಡೆದಿದ್ದು, ಜೂಜಾಟಕ್ಕೆ ರೂ.10,400 ನಗದು ಉಪಯೋಗಿಸಿರುವ ಬಗ್ಗೆ ವಿಚಾರಣೆ ತಿಳಿದು ಬಂದಿದೆ.

Call us

Call us

ಕಾರ್ಯಾಚರಣೆಯಲ್ಲಿ ಬೈಂದೂರು ಪೊಲೀಸ್ ಉಪನಿರೀಕ್ಷಕ ಪವನ್ ನಾಯಕ್, ಪೊಲೀಸ್ ಸಿಬ್ಬಂದಿಗಳಾದ ನಾಗೇಶ್ ಗೌಡ, ಅಶೋಕ್ ರಾಥೋಡ್, ಕಲ್ಲೊಲಪ್ಪ ಭಜಂತ್ರಿ, ಪರಯ್ಯ ಮಟಪತಿ, ಶ್ರೀಧರ ಪಾಟೀಲ್ ಭಾಗವಹಿಸಿದ್ದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

one × 5 =