ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೇ.24ರಂದು ಒಟ್ಟು 13 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಕಾರ್ಕಳ ಗ್ರಾಮಾಂತರ ಹಾಗೂ ಅಜೆಕಾರು ಪೊಲೀಸ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳು, ಓರ್ವ ಗರ್ಭಿಣಿ ಮಹಿಳೆ ಸೇರಿದಂತೆ, ಮಹಾರಾಷ್ಟ್ರದಿಂದ ಪ್ರಯಾಣದ ಹಿನ್ನೆಲೆಯುಳ್ಳವರಿಗೆ ಪಾಸಿಟವ್ ಇರುವುದು ದೃಢವಾಗಿದೆ.
ಜಿಲ್ಲೆಯಲ್ಲಿ ಸದ್ಯ ಒಟ್ಟು 76 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಮೂವರು ಬಿಡುಗಡೆಯಗಿದ್ದು, 72 ಮಂದಿ ಕೊರೋನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:
► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 .
► ಕುಂದಾಪುರದಲ್ಲಿ120 ಬೆಡ್‌ಗಳ ಕೋವಿಡ್-19 ಆಸ್ಪತ್ರೆ ಸಜ್ಜು – https://kundapraa.com/?p=37752 .