ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಭಾನುವಾರ 182 ಪಾಸಿಟಿವ್, 625 ನೆಗೆಟಿವ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಆ.02ರ ಭಾನುವಾರ 182 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 55, ಉಡುಪಿ ತಾಲೂಕಿನ 75 ಹಾಗೂ ಕಾರ್ಕಳ ತಾಲೂಕಿನ 52 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 107 ಪುರುಷರು, 75 ಮಹಿಳೆಯರು ಸೇರಿದ್ದಾರೆ.

ಇಂದು 78 ಮಂದಿ ಬಿಡುಗಡೆಗೊಂಡಿದ್ದು, ಓರ್ವ 54 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ಸಾರಿ 6 ಪ್ರಕರಣ, ILI 45 ಪ್ರಕರಣ, ಪ್ರಾಥಮಿಕ ಸಂಪರ್ಕದಿಂದ 76 ಪ್ರಕರಣ ಬಂದಿದ್ದು, 55 ಪ್ರಕರಣಗಳ ಮೂಲ ಪತ್ತೆ ಮಾಡಲಾಗುತ್ತಿದೆ.

625 ನೆಗೆಟಿವ್:
ಈ ತನಕ ಒಟ್ಟು 33,378 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 28,088 ನೆಗೆಟಿವ್, 4,674 ಪಾಸಿಟಿವ್ ಬಂದಿದ್ದು, 616 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 625 ನೆಗೆಟಿವ್, 182 ಪಾಸಿಟಿವ್ ಬಂದಿದೆ. ಒಟ್ಟು 1,267 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.

1,942 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 4,674 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 2,696 ಮಂದಿ ಬಿಡುಗಡೆಯಾಗಿದ್ದು, 1,942 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 36 ಮಂದಿ ಮೃತಪಟ್ಟಿದ್ದಾರೆ.

 

Leave a Reply

Your email address will not be published. Required fields are marked *

11 − one =