ಕುಂದಾಪುರ: ಕಾರು-ಬುಲೆಟ್ ಡಿಕ್ಕಿ. ಇಬ್ಬರು ಸವಾರರ ಸಾವು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಚರ್ಚ್ ರಸ್ತೆಯ ಬಳಿ ಕಾರು ಹಾಗೂ ಬುಲೆಟ್ ಬೈಕ್ ನಡುವಿನ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ನೇರಳೆಕಟ್ಟೆಯ ಕಿರಣ್ ಮೇಸ್ತ(24) ಹಾಗೂ ಕರ್ಕುಂಜೆಯ ರವೀಂದ್ರ ಕುಮಾರ್ (25) ಎಂದು ಗುರುತಿಸಲಾಗಿದೆ.

ಮದ್ದುಗುಡ್ಡೆ ಕಡೆಯಿಂದ ಕುಂದಾಪುರ ಕಡೆಗೆ ಮಹಿಳೆಯೊಬ್ಬರು ಮಾರುತಿ ಅಲ್ಟೋ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದು ಕುಂದಾಪುರ ಕಡೆಯಿಂದ ಮದ್ದುಗುಡ್ಡೆ ಕಡೆಗೆ ಬರುತ್ತಿದ್ದ ಬುಲೆಟ್ಗೆ ಢಿಕ್ಕಿ ಕಾರು ಹೊಡೆದಿದ್ದಾರೆ. ಇದರಿಂದ ಸವಾರರಿಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Call us

Leave a Reply

Your email address will not be published. Required fields are marked *

13 + 1 =