ಉಪ್ಪುಂದ: ಕಾಲುಜಾರಿ ನದಿಗೆ ಬಿದ್ದ 2 ವರ್ಷದ ಮಗು ಮೃತ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮನೆಯ ಸಮೀಪದ ಹೊಳೆದಂಡೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗುವೊಂದು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಉಪ್ಪುಂದ ಕರ್ಕಿಕಳಿ ವಿಶ್ವನಾಥ ಖಾರ್ವಿ ಅವರ ಪುತ್ರ ಸರ್ವದ (2 ವರ್ಷ 1 ತಿಂಗಳು) ಮೃತ ದುರ್ದೈವಿ.

Call us

Call us

ಸೋಮವಾರ ಮಧ್ಯಾಹ್ನ 3:30ರ ವೇಳೆಗೆ ವಿಶ್ವನಾಥ ಖಾರ್ವಿ ಅವರು ಮನೆಯ ಕೋಣೆಯಲ್ಲಿ ಮಗುವನ್ನು ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದರು. ಮಗುವಿನ ತಾಯಿ ಬೇರೆ ಕೆಲಸದಲ್ಲಿ ನಿರತರಾಗಿದ್ದರು. ಸುಮಾರು 4 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಕೋಣೆಯಲ್ಲಿ ಮಲಗಿದ್ದ ಮಗು ಎದ್ದು, ಯಾರ ಗಮನಕ್ಕೂ ಬಾರದಂತೆ ಮನೆಯ ಸಮೀಪ ಹರಿಯುವ ಎಡಮಾವಿನ ಹೊಳೆಯ ದಡದಲ್ಲಿ ನಡೆದುಕೊಂಡು ಹೋಗಿತ್ತು ಎನ್ನಲಾಗಿದೆ. ಈ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದೆ.

ಮೃತದೇಹವು ತೇಲಿಕೊಂಡು ಹೋಗಿ ಎಡಮಾವಿನ ಹೊಳೆಯು ಸಮುದ್ರವನ್ನು ಸೇರುವ ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ನೀರಿನಲ್ಲಿ ದೊರೆತಿರುವುದಾಗಿ ವರದಿಯಾಗಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

One thought on “ಉಪ್ಪುಂದ: ಕಾಲುಜಾರಿ ನದಿಗೆ ಬಿದ್ದ 2 ವರ್ಷದ ಮಗು ಮೃತ

Leave a Reply

Your email address will not be published. Required fields are marked *

five × 2 =